ಜಪಾನ್‌ನಲ್ಲಿ ಭೂಕಂಪ; ಸುನಾಮಿಯಿಲ್ಲ
ಟೋಕಿಯೊ, ಜ. 11: ಉತ್ತರ ಜಪಾನ್‌ನ ಆವೊಮೊರಿ ರಾಜ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 4.5ರ ಆರಂಭಿಕ ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಭೂಕಂಪದಿಂದ ಸುನಾಮಿಯ ಅಪಾಯವಿಲ್ಲ ಎಂದು ಜಪಾನ್ ಭೂಗರ್ಭ ಸಂಸ್ಥೆ ಸೋಮವಾರ ಹೇಳಿದೆ.
2011 ಮಾರ್ಚ್ 11ರಂದು ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 9ರ ತೀವ್ರತೆಯ ಭಯಾನಕ ಭೂಕಂಪ ಸಂಭವಿಸಿತ್ತು. ಈ ಪ್ರಬಲ ಭೂಕಂಪದ ಪರಿಣಾಮವಾಗಿ ಬೃಹತ್ ಸುನಾಮಿ ಅಲೆಗಳು ಜಪಾನ್ ಕರಾವಳಿಯನ್ನು ಛಿದ್ರಗೊಳಿಸಿದ್ದವು.
ಭೂಕಂಪ ಮತ್ತು ಸುನಾಮಿಯ ಪರಿಣಾವಾಗಿ 19,000ಕ್ಕೂ ಅಧಿಕ ಮಂದಿ ಮೃತಪಟ್ಟರು.
Next Story