73ನೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ‘ದ ರೆವನಂಟ್’ಗೆ 3 ಪ್ರಶಸ್ತಿ; ಡಿಕ್ಯಾಪ್ರಿಯೊ ಶ್ರೇಷ್ಠ ನಟ

ಲಾಸ್ ಏಂಜಲಿಸ್,ಜ.11: ಬದುಕುಳಿಯುವುದಕ್ಕಾಗಿ ನಡೆಸುವ ಹೋರಾಟವನ್ನು ನಿರೂಪಿಸುವ ‘ದ ರೆವನಂಟ್’ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿ ರೋಮಾಂಚಕ ಕತೆಯನ್ನೊಳಗೊಂಡ ‘ದ ಮಾರ್ಶಿಯನ್’ ಚಿತ್ರಗಳು ‘ಗೋಲ್ಡನ್ ಗ್ಲೋಬ್ಸ್’ ಪ್ರಶಸ್ತಿ ಪ್ರದಾನದಲ್ಲಿ ಐದು ಅಗ್ರ ಪ್ರಶಸ್ತಿಗಳನ್ನು ಬಾಚಿಕೊಂಡವು. ಅದೇ ವೇಳೆ, ಲಿಯೊನಾರ್ಡೊ ಡಿಕ್ಯಾಪ್ರಿಯೊ ಶ್ರೇಷ್ಠ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
‘ದ ರೆವನಂಟ್’ ಚಿತ್ರ ಶ್ರೇಷ್ಠ ಚಿತ್ರ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಪಡೆಯಿತು. ಅಲೆಜಾಂಡ್ರೊ ಗೊನ್ಸಾಲಿಸ್ ಇನಾರಿಟ್ಟು ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಪಡೆದರೆ, ಡಿಕ್ಯಾಪ್ರಿಯೊ ಶ್ರೇಷ್ಠ ನಟ ಪ್ರಶಸ್ತಿ ಪಡೆದರು.
ಡಿಕ್ಯಾಪ್ರಿಯೊ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆಯುತ್ತಿ ರುವುದು ಇದು 3ನೆ ಸಲ. ಇದಕ್ಕೂ ಮೊದಲು, ‘ದಿ ಆ್ಯವಿ ಯೇಟರ್’ ಮತ್ತು ‘ವುಲ್ಫ್ ಆಫ್ ದ ವಾಲ್ ಸ್ಟ್ರೀಟ್’ ಚಿತ್ರಗಳಿಗಾಗಿ ಅವರು ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ.
ವಿಜೇತರ ವಿವರಗಳು ಇಲ್ಲಿವೆ:
*ಶ್ರೇಷ್ಠ ನಟಿ (ಡ್ರಾಮ): ಬ್ರೈ ಲಾರ್ಸನ್ (ರೂಮ್ ಚಿತ್ರಕ್ಕಾಗಿ)
*ಶ್ರೇಷ್ಠ ನಟ (ಡ್ರಾಮ): ಲಿಯನಾರ್ಡೊ ಡಿಕ್ಯಾಪ್ರಿಯೊ (ದ ರೆವನಂಟ್)
*ಶ್ರೇಷ್ಠ ನಟಿ (ಮ್ಯೂಸಿಕಲ್ ಅಥವಾ ಕಾಮಿಡಿ):ಜೆನಿಫರ್ ಲಾರೆನ್ಸ್ (ಜಾಯ್)
* ಶ್ರೇಷ್ಠ ನಟ (ಮ್ಯೂಸಿಕಲ್ ಅಥವಾ ಕಾಮಿಡಿ):ಮ್ಯಾಟ್ ಡ್ಯಾಮನ್ (ದ ಮಾರ್ಶಿಯನ್)
*ಶ್ರೇಷ್ಠ ಪೋಷಕ ನಟಿ: ಕೇಟ್ ವಿನ್ಸ್‌ಲೆಟ್ (ಸ್ಟೀವ್ ಜಾಬ್ಸ್)
*ಶ್ರೇಷ್ಠ ಪೋಷಕ ನಟ: ಸಿಲ್ವೆಸ್ಟರ್ ಸ್ಟಲೋನ್ (ಕ್ರೀಡ್)
*ಶ್ರೇಷ್ಠ ನಿರ್ದೇಶಕ:ಅಲೆಜಾಂಡ್ರೊ ಗೊನ್ಸಾಲಿಸ್ ಇನಾರಿಟು (ದ ರೆವನಂಟ್)
*ಶ್ರೇಷ್ಠ ಚಿತ್ರ (ಡ್ರಾಮ): ದ ರೆವನಂಟ್
* ಶ್ರೇಷ್ಠ ಚಿತ್ರ (ಮ್ಯೂಸಿಕಲ್ ಅಥವಾ ಕಾಮಿಡಿ):ದ ಮಾರ್ಶಿಯನ್