ಇರಾಕ್: ಬಾಂಬ್ ದಾಳಿಗೆ 20 ಬಲಿ

ಬಕೂಬಾ (ಇರಾಕ್): ಬಾಗ್ದಾದ್ ಈಶಾನ್ಯ ಪಟ್ಟಣವಾದ ಮಕ್ದಾದಿಯಾದ ಮಾಲ್ ಒಂದರಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಗೆ ಕನಿಷ್ಠ 20 ಮಂದಿ ಬಲಿಯಾಗಿದ್ದಾರೆ.
ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಾಲ್‌ನ ಕೆಫೆಯೊಂದರಲ್ಲಿ ಬಾಂಬ್ ಸ್ಫೋಟವಾಯಿತು. ಇದನ್ನು ನೋಡಲು ಜನ ಸೇರಿದಾಗ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಕಗಳನ್ನು ಹೊಂದಿದ್ದ ಕಾರ್ ಸ್ಫೋಟಿಸಿದ ಎಂದು ಪೊಲೀಸ್ ಮುಖ್ಯಸ್ಥ ಹಾಗೂ ಸೇನಾ ಕರ್ನಲ್ ಹೇಳಿದ್ದಾರೆ. ಈ ದಾಳಿ ಹೊಣೆಯನ್ನು ಯಾವುದೇ ಸಂಘಟನೆ ತಕ್ಷಣಕ್ಕೆ ಹೊತ್ತಿಲ್ಲ.
ದಾಳಿಯಲ್ಲಿ ಹಲವು ಸುನ್ನಿ ಮುಸ್ಲಿಂ ಮನೆಗಳು ಭಸ್ಮವಾಗಿವೆ ಹಾಗೂ ಒಂದು ಮಸೀದಿ ಸುಟ್ಟುಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರದೇಶವನ್ನು ಐಸಿಸ್ ಉಗ್ರರಿಂದ ಮುಕ್ತಗೊಳಿಸಲಾಗಿದ್ದು, ಇನ್ನೂ ಜಿಹಾದಿ ಉಗ್ರರು ಈ ಪ್ರದೇಶದಲ್ಲಿ ಅಸ್ತಿತ್ವ ಹೊಂದಿದ್ದಾರೆ ಎಂದು ಹಿರಿಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
Next Story