ಪ್ರಾಥಮಿಕ ಶಿಕ್ಷಣ: ಕೇರಳ ಟಾಪ್
ತಿರುವನಂತಪುರ: ಶೇಕಡ 100ರಷ್ಟು ಪ್ರಾಥಮಿಕ ಶಿಕ್ಷಣ ಸಾಧಿಸಿದ ದೇಶದ ಮೊಟ್ಟಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದ್ದು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇದನ್ನು ಬುಧವಾರ ಅಧಿಕೃತವಾಗಿ ಘೋಷಿಸಲಿದ್ದಾರೆ.
ರಾಜ್ಯ ಸಾಕ್ಷರತಾ ಮಿಷನ್ ಅತುಲ್ಯಂ ಮೂಲಕ ಇದನ್ನು ಸಾಧಿಸಲಾಗಿದ್ದು, ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ಪದ್ಧತಿ ಅತ್ಯಂತ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಪ್ಲಸ್ ಟೂ ಶಿಕ್ಷಣ ಪಡೆಯುವಂತೆ ಗುರಿಸಾಧನೆ ಮಾಡುವುದು ನಮ್ಮ ಉದ್ದೇಶ ಎಂದು ಶಿಕ್ಷಣ ಸಿವ ಪಿ.ಕೆ.ಅಬ್ದು ರಬ್ಬಾ ಪ್ರಕಟಿಸಿದ್ದಾರೆ.
ಕೇರಳ ವಿಶ್ವವಿದ್ಯಾನಿಲಯದ ಸೆನೆಟ್ ಹಾಲ್‌ನಲ್ಲಿ ಬುಧವಾರ ನಡೆಯುವ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳು ಈ ಘೋಷಣೆ ಮಾಡಲಿದ್ದಾರೆ.
ಈ ಯೋಜನೆಯಡಿ ವಿವಿಧ ಕಾರಣಗಳಿಂದ ಪ್ರಾಥಮಿಕ ಶಿಕ್ಷಣದಲ್ಲಿ ಅನುತ್ತೀರ್ಣರಾದವರಿಗೆ ನೇರವಾಗಿ ನಾಲ್ಕನೇ ತರಗತಿಗೆ ಬಡ್ತಿ ನೀಡಲು ನಿರ್ಧರಿಸಲಾಗಿತ್ತು.
Next Story





