ನ್ಯಾನೋ ಕಾರು ಪಲ್ಟಿ; ಇಬ್ಬರು ಸಾವು
ಹಾಸನ , ಜ.12: ನ್ಯಾನೊ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಚನ್ನರಾಯಪಟ್ಟಣದ ಚಿಕ್ಕಗೊಂಡನಹಳ್ಳಿ ಗೆಡ್ಡ ಗ್ರಾಮದಲ್ಲಿ ಇಂದು ಸಂಭವಿಸಿದೆ.
ಉಡುಪಿಯ ಪೆರ್ನಂಕಿಲ ಗ್ರಾಮದ ನಿವಾಸಿಗಳಾದ ಅಶೋಕ್ ಪ್ರಭು(45) ಮತ್ತು ಅವರ ಪತ್ನಿ ಅಶ್ವಿನ್ ಪ್ರಭು(35) ಸ್ಥಳದಲ್ಲೇ ಮೃತಪಟ್ಟರು. ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಅಶೋಕ್ ಪ್ರಭು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ಅಫಘಾತ ಸಂಭವಿಸಿದೆ.
ಹಿರಿಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





