ಮೂಡುಬಿದಿರೆ: ಜ್ಯೋತಿನಗರ ಶಾಲೆಯಲ್ಲಿ ವಿವೇಕಾನಂದ ಜಯಂತಿ

ಮೂಡುಬಿದಿರೆ: ಸ.ಮಾ.ಹಿ.ಪ್ರಾ.ಶಾಲೆ ಜ್ಯೋತಿನಗರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ಜೈನ ಪ್ರೌಢಶಾಲೆಯ ಅಧ್ಯಾಪಕ ಮುನಿರಾಜ ರೆಂಜಾಳ, ಸ್ವಾಮಿ ವಿವೆಕಾನಂದರ ಜೀವನದ ಸ್ವಾರಸ್ಯಕರ ವಿಷಯಗಳನ್ನು , ಉದಾತ್ತ ಧ್ಯೇಯಗಳನ್ನು ತಿಳಿಸುತ್ತಾ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದರ ಮೂಲಕ ವಿವೇಕಾನಂದರಂತೆ ಜ್ಞಾನವಂತರಾಗಬೇಕೆಂದು ಹೇಳಿದರು.
ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ವೇತಾ, ರೋಸಾ ಮಿಸ್ತಿಕಾ ತರಬೇತಿ ಸಂಸ್ಥೆಯ ಲವಿನಾ ಲೋಬೋ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ವನಿತಾ ಸ್ವಾಗತಿಸಿ, ಸಹ ಶಿಕ್ಷಕ ಪ್ರಸನ್ನ ಶೆಣೈ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ವಿನ್ನಿಫ್ರೆಡ್ ವಂದಿಸಿದರು.
Next Story





