ಮಂಗಳೂರು:27 ನೇ ರಾಷ್ಟ್ರೀಯ ಸುರಕ್ಷತಾ 2016 ಕಾರ್ಯಕ್ರಮ

ಮಂಗಳೂರು,ಜ.12:ದ.ಕ ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದು ಮಂಗಳೂರು ಪೊಲೀಸ್ ಭವನದಲ್ಲಿ 27 ನೇ ರಾಷ್ಟ್ರೀಯ ಸುರಕ್ಷತಾ 2016 ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ್ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಸಾಕ್ಷರತೆ ಕಾರ್ಯಕ್ರಮಕ್ಕೆ ನೀಡುವ ಮಹತ್ವದಷ್ಟೆ ರಸ್ತೆ ಸುರಕ್ಷತಾ ಸಪ್ತಾಹಕ್ಕೂ ಮಹತ್ವ ನೀಡಬೇಕು. ಯುದ್ದದಲ್ಲಿ ಮರಣವನ್ನಪ್ಪುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದು ಇದನ್ನು ತಡೆಯಲು ಜಾಗೃತಿ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜೆ. ಆರ್. ಲೋಬೋ ವಹಿಸಿದ್ದರು. ಸಮಾರಂಭದಲ್ಲಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ.ಶರಣಪ್ಪ, ಮಂಗಳೂರು ನಗರ ಡಿಸಿಪಿಗಳಾದ ಡಾ. ಸಂಜೀವ ಪಾಟೀಲ್ ಮತ್ತು ಶಾಂತರಾಜು , ಉಪಸಾರಿಗೆ ಆಯುಕ್ತ ಜಿ. ಎಸ್.ಹೆಗಡೆ, ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ನಾರಾಯಣ ಪಿ.ಎಂ ಉಪಸ್ಥಿತರಿದ್ದರು.





