ಜ. 15-17: ಟ್ಯಾಲೆಂಟ್ ದಶಮಾನೋತ್ಸವ ಸಂಭ್ರಮ-ಸೇವಾ ಉತ್ಸವ
ಮಂಗಳೂರು, ಜ. 12: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವ ಸಂಭ್ರಮ-ಸೇವಾ ಉತ್ಸವ 2016 ಜ. 15ರಿಂದ 17ರ ತನಕ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ಯು. ಬಿ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಜ. 15ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದಿಂದ ಪುರಭವನದವರೆಗೆ ವಾಕತಾನ್ (ಸೇವೆಗಾಗಿ ನಡಿಗೆ) ನಡೆಯಲಿದೆ. ಪಶ್ಚಿಮ ವಲಯ ಐಜಿಪಿ ಅಮೃತಪಾಲ್ ಚಾಲನೆ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಪುರಭವನ ಮುಂಭಾಗದಲ್ಲಿ ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸೇವಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಬಳಿಕ ದ್ ಸ್ಪರ್ಧೆ ಆಯೋಜಿಸಲಾಗಿದ್ದು, ಜಿಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ ಎಂದು ಅವರು ಹೇಳಿದರು. 16ರಂದು ಬೆಳಗ್ಗೆ 9.30ಕ್ಕೆ ವಿಕಲ ಚೇತನರಿಗಾಗಿ ‘ಸ್ವಾಭಿಮಾನ್’-ಪ್ರೇರಣಾ ಕಾರ್ಯಕ್ರಮ ನಡೆಯಲಿದೆ. ಸಾಧನೆ ಮಾಡಿದ ವಿಕಲಚೇತನರು ತಮ್ಮ ಸಾಧನೆಯನ್ನು ವೇದಿಕೆಯಲ್ಲಿ ಹಂಚಿಕೊಳ್ಳಲಿದ್ದಾರೆ. ವಿಶೇಷ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1.30ಕ್ಕೆ ‘ಟ್ಯಾಲೆಂಟ್ ಕ್ವೆಸ್ಟ್-2016’ ಸ್ಟೇಜ್ ಶೋ, ಪೈಂಟಿಂಗ್, ಡ್ರಾಯಿಂಗ್, ಪೇಪರ್ ಕ್ರಾಪ್ಟ್, ವಿಜ್ಞಾನ ಮಾದರಿಗಳ ತಯಾರಿ ಮೊದಲಾದ ವಿಷಯಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಜೂನಿಯರ್ (10ನೇ ತರಗತಿ ತನಕ), ಸೀನಿಯರ್ (ಕಾಲೇಜು ವಿಭಾಗ) ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.
ಸ್ನೇಹ ಸಮ್ಮಿಲನ
ಸಂಜೆ 5 ಗಂಟೆಗೆ ಜಿಲ್ಲೆಯ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸ್ನೇಹ ಸಮ್ಮಿಲನ ನಡೆಯಲಿದೆ. ಗುಣಮಟ್ಟದ ಶಿಕ್ಷಣ, ಮಾದರಿ ಶಿಕ್ಷಣ ಸಂಸ್ಥೆ ಮೊದಲಾದ ವಿಷಯಗಳ ಕುರಿತು ಆಡಳಿತ ಮಂಡಳಿಯ ಸದಸ್ಯರೊಂದಿಗೆ ಸಂವಾದ ಮತ್ತು ಚರ್ಚೆಯನ್ನು ಈ ವೇಳೆ ಹಮ್ಮಿಕೊಳ್ಳಲಾಗಿದೆ.ರಾಜ್ಯ ಮಟ್ಟದ ಅಧಿಕಾರಿಗಳು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಜ.17ರಂದು ಮಧಯಾಹ್ನ 2 ಗಂಟೆಯಿಂದ ಹುಸೇನ್ ಕಾಟಿಪಳ್ಳ ಮತ್ತು ಬಳಗದಿಂದ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4 ಗಂಟೆಗೆ ಸಮಾರೋಪ ಜರಗಲಿದೆ. ಅನಂತರ ಎಚ್. ದುಂಡಿರಾಜ್ ಮತುತಿ ನರಸಿಂಹ ಮೂರ್ತಿ ಬೆಂಗಳೂರು ಅವರಿಂದ ನಗೆಹಬ್ಬ ಆಯೋಜಿಸಲಾಗಿದೆ ಎಂದು ಮುಹಮ್ಮದ್ ಯು. ಬಿ. ವಿವರಿಸಿದರು.
ಅಧ್ಯಕ್ಷ ರಿಯಾಝ್ ಅಹಮದ್ ಕಣ್ಣೂರು, ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ, ಬಿ. ಎ. ಅಕ್ಬರ್ ಅಲಿ, ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.
ಬಾಕ್ಸ್ ಮಾಡಬಹುದು.
‘ರಿಯಲ್ ಹೀರೋಗಳೊಂದಿಗೆ ಒಂದು ದಿನ’
17ರಂದು ಬೆಳಗ್ಗೆ 9.30ಕ್ಕೆ ರಿಯಲ್ ಹೀರೋಗಳೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಾಧಕರಿಗೆ ‘ಟ್ಯಾಲೆಂಟ್ ನ್ಯಾಷನಲ್ ಐಕಾನ್-2016’ ಪ್ರಶಸ್ತಿ







