ಮೊದಲ ಏಕದಿನ : ಹಲವು ದಾಖಲೆ ಮುರಿದ ರೋಹಿತ್

ಪರ್ತ್, ಜ.12: ಆಸ್ಟ್ರೇಲಿಯ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 9ನೆ ಶತಕವನ್ನು ಸಿಡಿದ ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮ ಹಲವು ದಾಖಲೆಗಳನ್ನೂ ಮುರಿದರು.
163 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 13 ಬೌಂಡರಿಗಳನ್ನು ಸಿಡಿಸಿರುವ 28ರ ಹರೆಯದ ರೋಹಿತ್ ಅವರು ವಿರಾಟ್ ಕೊಹ್ಲಿ(91ರನ್) ಅವರೊಂದಿಗೆ 2ನೆ ವಿಕೆಟ್‌ಗೆ 207 ರನ್ ಜೊತೆಯಾಟ ನಡೆಸಿದರು. ಈ ಮೂಲಕ ಆಸ್ಟ್ರೆಲಿಯದಲ್ಲಿ ಭಾರತದ ಪರ ಗರಿಷ್ಠ ಜೊತೆಯಾಟದಲ್ಲಿ ಪಾಲ್ಗೊಂಡರು. 199 ರನ್ ಜೊತೆಯಾಟ ನಡೆಸಿದ್ದ ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್‌ರ ದಾಖಲೆಯೂ ಪತನಗೊಂಡಿತು.
ರೋಹಿತ್ ಬರೆದ ಇತರ ದಾಖಲೆಗಳು ಇಂತಿವೆ:
* ರೋಹಿತ್ ಪರ್ತ್‌ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್
* ರೋಹಿತ್ ಹಾಗೂ ಕೊಹ್ಲಿ ಆಸ್ಟ್ರೇಲಿಯ ನೆಲದಲ್ಲಿ ಆಸ್ಟ್ರೇಲಿಯದ ವಿರುದ್ಧ 2ನೆ ವಿಕೆಟ್‌ಗೆ 2ನೆ ಗರಿಷ್ಠ ಜೊತೆಯಾಟ ನಡೆಸಿದರು. ಈ ಮೂಲಕ 1978-79ರಲ್ಲಿ ಎಂಸಿಜಿಯಲ್ಲಿ ಡೆಸ್ಮಂಡ್ ಹಾಗೂ ರಿಚರ್ಡ್ಸ್ 205 ರನ್ ಜೊತೆಯಾಟವನ್ನು ಮುರಿದರು.
*ರೋಹಿತ್(ಔಟಾಗದೆ 171 ರನ್ ) ಆಸ್ಟ್ರೇಲಿಯದ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಪ್ರವಾಸಿ ತಂಡದ ಮೊದಲ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು. 1979-80ರಲ್ಲಿ ಮೆಲ್ಬೋರ್ನ್‌ನಲ್ಲಿ ವೆಸ್ಟ್‌ಇಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್ ಔಟಾಗದೆ ದಾಖಲಿಸಿದ್ದ 153 ರನ್ ದಾಖಲೆಯನ್ನು ಮುರಿದರು.
* ರೋಹಿತ್ ಏಷ್ಯಾದ ಹೊರಗೆ ಮೂರನೆ ಗರಿಷ್ಠ ಸ್ಕೋರ್ ದಾಖಲಿಸಿದ ಭಾರತ ದಾಂಡಿಗ ಎನಿಸಿಕೊಂಡರು.
* ರೋಹಿತ್ ಆಸ್ಟ್ರೇಲಿಯದ ವಿರುದ್ಧ ಅತ್ಯಂತ ವೇಗವಾಗಿ (19 ಇನಿಂಗ್ಸ್) ಸಾವಿರ ರನ್ ಪೂರೈಸಿದರು. ತಲಾ 20 ಇನಿಂಗ್ಸ್‌ನಲ್ಲಿ ಸಾವಿರ ರನ್ ಪೂರೈಸಿದ್ದ ತೆಂಡುಲ್ಕರ್ ಹಾಗೂ ಬ್ರಿಯಾನ್ ಲಾರಾ ದಾಖಲೆಯನ್ನು ಮುರಿದರು.
* ಆಸ್ಟ್ರೇಲಿಯದ ವಿರುದ್ಧ ಅದರದೇ ನೆಲದಲ್ಲಿ ಮೂರನೆ ಶತಕ ಸಿಡಿಸಿದ ರೋಹಿತ್ ವಿವಿಎಸ್ ಲಕ್ಷ್ಮಣ್‌ರೊಂದಿಗೆ ತಮ್ಮ ಸಾಧನೆ ಹಂಚಿಕೊಂಡರು.
* ರೋಹಿತ್ ಆಸ್ಟ್ರೇಲಿಯದ ವಿರುದ್ಧ ನಾಲ್ಕನೆ ಶತಕ ಬಾರಿಸಿದರು. ಸಚಿನ್ ತೆಂಡುಲ್ಕರ್(9) ಹಾಗೂ ಡೆಸ್ಮಂಡ್ ಹೇಯ್ನ್ಸ(6) ಆಸೀಸ್‌ನ ವಿರುದ್ಧ ಗರಿಷ್ಠ ಶತಕ ದಾಖಲಿಸಿದ್ದಾರೆ.
* ರೋಹಿತ್ ಏಕದಿನದಲ್ಲಿ ನಾಲ್ಕನೆ ಬಾರಿ 150 ಹಾಗೂ ಅದಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿದರು. ತೆಂಡುಲ್ಕರ್ ಐದು ಬಾರಿ ಈ ಸಾಧನೆ ಮಾಡಿದ್ದಾರೆ.
* ರೋಹಿತ್ ಏಕದಿನದಲ್ಲಿ ಬಾರಿಸಿರುವ ನಾಲ್ಕನೆ ಶತಕ ವ್ಯರ್ಥವಾಯಿತು.







