Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ12 Jan 2016 11:38 PM IST
share

ಅರ್ಜಿ ಆಹ್ವಾನ
 ಮಂಗಳೂರು, ಜ.12: ಜಿಲ್ಲೆಯ ವಿವಿಧ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೆ ತರಗತಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ತಾಲೂಕಿನ ಕಲ್ಲಬೆಟ್ಟು, ನೀರುಮಾರ್ಗ, ಕಮ್ಮಾಜೆ, ಬೆಳ್ತಂಗಡಿ ತಾಲೂಕಿನ ಮಚ್ಚಿನ, ಮುಂಡಾಜೆ, ಬಂಟ್ವಾಳ ತಾಲೂಕಿನ ವಗ್ಗ, ಪುತ್ತೂರು ತಾಲೂಕಿನ ಬಲ್ನಾಡು, ಸುಳ್ಯ ತಾಲೂಕಿನ ಪಂಜದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ರಾಜ್ಯದ ಯಾವುದೇ ಶಾಲೆಗಳಲ್ಲಿ 5ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾ.6ರಂದು ಆಯ್ಕೆಗೆ ಪ್ರವೇಶ ಪರೀಕ್ಷೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಎಲ್ಲ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿ ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಅರ್ಜಿಗಳನ್ನು ಜ.14ರವರೆಗೆ ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಜ. 20 ಕೊನೆಯ ದಿನವಾಗಿದೆ. ಮಾಹಿತಿಗಾಗಿ ವಸತಿ ಶಾಲೆಯ ಪ್ರಾಂಶುಪಾಲರನ್ನು ದೂ.ಸಂ. 0824-2451237ನ್ನು ಸಂಪರ್ಕಿಸುವಂತೆ ಜಿಲ್ಲಾ ಮಟ್ಟದ ಪ್ರವೇಶ ಪರೀಕ್ಷಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ಇಂದು ಕಣ್ಣೂರಿನಲ್ಲಿ ಮೀಲಾದ್ ಕಾರ್ಯಕ್ರಮ

ಮಂಗಳೂರು,ಜ.12: ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ಕಣ್ಣೂರು ಯುನಿಟ್ ವತಿಯಿಂದ ‘ವೌಲಿದ್ ಮೀಲಾದುನ್ನಬಿ ಆಚರಣೆಯ ವಿರುದ್ಧ ಆರೋಪಗಳಿಗೆ ಕ್ಲಿಪ್ಪಿಂಗ್ ಸಹಿತ ಉತ್ತರ’ ಕಾರ್ಯಕ್ರಮವು ಜ.13ರಂದು ಮಗ್ರಿಬ್ ನಮಾಝ್‌ನ ಬಳಿಕ ಅಡ್ಯಾರ್ ಕಣ್ಣೂರಿನ ಸೀಝರ್ ಮೈದಾನದಲ್ಲಿ ನಡೆಯಲಿದೆ.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಮ್ಮದ್ ಶರೀಫ್ ಅರ್ಶದಿ ವಹಿಸಲಿದ್ದು, ಸೈಯದ್ ತ್ವಾಹ ಜಿಫ್ರಿ ತಂಙಳ್ ದುಆ ನೆರವೇರಿಸುವರು. ಸೈಯದ್‌ಝೈನುಲ್ ಆಬಿದಿನ್ ಜಿಫ್ರಿ ತಂಙಳ್ ಉದ್ಘಾಟಿಸುವರು. ಪ್ರಾಸ್ತಾವಿಕ ಭಾಷಣವನ್ನು ಸ್ವದಖತುಲ್ಲಾ ಫೈಝಿ ಪ್ರಾಸ್ತಾವಿಕ ಭಾಷಣ ಮಾಡುವರು. ಮುಸ್ತಫಾ ಅಶ್ರಫಿ ಕಕ್ಕುಪಡಿ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟನೆ ತಿಳಿಸಿದೆ.


ಹೆಚ್ಚುವರಿ ಬಸ್ ಒದಗಿಸಲು ಇಂಟಕ್ ಮನವಿ

ಪುತ್ತೂರು, ಜ.12: ಜಿಲ್ಲಾ ಕೇಂದ್ರವಾಗುತ್ತಿರುವ ಪುತ್ತೂರಿಗೆ ಸಾರಿಗೆ ಬಸ್‌ಗಳನ್ನು ಹೆಚ್ಚುಗೊಳಿಸಬೇಕು ಮತ್ತು ಇತರ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘ(ಇಂಟಕ್)ವು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ. ನರ್ಮ್ ಯೋಜನೆಯಡಿಯಲ್ಲಿ ಪುತ್ತೂರಿಗೆ 25 ಬಸ್ಸುಗಳನ್ನು ನೀಡಬೇಕು. ಪುತ್ತೂರಿನಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಡಿಪೋದ 2ನೆ ಘಟಕವನ್ನು ಬನ್ನೂರಿನಲ್ಲಿ ನಿರ್ಮಿಸಬೇಕು ಇತ್ಯಾದಿ ಬೇಡಿಕೆ ಮುಂದಿಟ್ಟಿದೆ.ಇಂಟಕ್ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿ ಜಿ. ಈಶ್ವರ ನಾಯ್ಕ, ಉಪಾಧ್ಯಕ್ಷ ಕುಶ ಎಸ್., ಖಜಾಂಚಿ ರಘುರಾಜ್ ನಿಯೋಗದಲ್ಲಿದ್ದರು.

ಕಾಮಗಾರಿಗೆ ಶಿಲಾನ್ಯಾಸ
ಕಟೀಲು, ಜ.12: ಇಲ್ಲಿನ ಪಂಚಾಯತ್ ವ್ಯಾಪ್ತಿಯ ಗಿಡಿಗೆರೆ ಪೂಪಾಡಿಕಟ್ಟೆ ರಸ್ತೆಗೆ 60 ಲಕ್ಷ ರೂ. ವೆಚ್ಚದ ಪೇವರ್ ಫಿನಿಸ್ ರಸ್ತೆ ಕಾಮಗಾರಿಗೆ ಹಾಗೂ ಕಟೀಲು ದೇಗುಲ ಬಳಿಯ ಕುದ್ರುವಿನ 30 ಲಕ್ಷ ರೂ. ವೆಚ್ಚದ ತಡೆಗೋಡೆ ಕಾಮಗಾರಿಗೆ ಸಚಿವ ಅಭಯಚಂದ್ರ ಜೈನ್ ಶಿಲಾನ್ಯಾಸಗೈದರು.
ಕಟೀಲು ದೇಗುಲದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಜಿಪಂ ಸದಸ್ಯ ಈಶ್ವರ ಕಟೀಲ್, ತಾಪಂ ಸದಸ್ಯೆ ಬೇಬಿ ಕೋಟ್ಯಾನ್, ಕಟೀಲು ಗ್ರಾಪಂ ಅಧ್ಯಕ್ಷೆ ಗೀತಾ ಪೂಜಾರಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಜನಾರ್ದನ ಕಿಲೆಂಜೂರು, ರಮಾನಂದ ಪೂಜಾರಿ, ಪದ್ಮಲತಾ, ಬೇಬಿ, ಜಯಂತಿ, ಎಪಿಎಂಸಿ ಅಧ್ಯಕ್ಷ ಮೋನಪ್ಪಶೆಟ್ಟಿ, ತಿಮ್ಮಪ್ಪಕೋಟ್ಯಾನ್, ಪ್ರಮೋದ್ ಕುಮಾರ್, ಶೈಲಾ ಸಿಕ್ವೇರ, ನವೀನ್ ಕುಮಾರ್, ಪಿಡಿಒ ಪ್ರಕಾಶ್ ಬಿ, ಎಇಇ ಷಣ್ಮುಗಂ, ಪಿಡಬ್ಲೂಡಿ ಎಂಜಿನಿಯರ್ ಶ್ರೀಧರ್ ಮುಂತಾದವರಿದ್ದರು.

ರಂಗ ಬೆಳಕು ಕಾರ್ಯಕ್ರಮ
ಕಾರ್ಕಳ, ಜ.12: ಬದುಕು ಮತ್ತು ನಾಟಕಕ್ಕೆ ಅವಿನಾಭಾವ ಸಂಬಂಧವಿದೆ. ಜೀವನವೇ ಒಂದು ನಾಟಕ, ಜೀವನದಲ್ಲಿ ಎಲ್ಲರೂ ಕೂಡ ಕಲಾವಿದರೇ ಆಗಿದ್ದಾರೆ ಎಂದು ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ ಹೇಳಿದ್ದಾರೆ.ಮಂಜುನಾಥ ಪೈ ಸಭಾಂಗಣದಲ್ಲಿ ರಂಗ ಸಂಸ್ಕೃತಿ ಕಾರ್ಕಳ ವತಿಯಿಂದ ಬಿ.ಗಣಪತಿ ಪೈ ರಂಗೋತ್ಸವ (ರಾಜ್ಯ ಮಟ್ಟದ ಐದು ನಾಟಕಗಳ ಸ್ಪರ್ಧೆ) ರಂಗ ಬೆಳಕು ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭ ತುಳು ನಾಟಕ ರಚನೆಗಾರ ವಿಲಾಸ್‌ಕುಮಾರ್ ನಿಟ್ಟೆಯವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವೈದ್ಯಾಧಿಕಾರಿ ಮಂಜುನಾಥ ಕಿಣಿ, ರಂಗಸಂಸ್ಕೃತಿ ಅಧ್ಯಕ್ಷ ಎಸ್. ನಿತ್ಯಾನಂದ ಪೈ, ಪದಾಧಿಕಾರಿಗಳಾದ ಸಾಣೂರು ಮೋಹನ್‌ದಾಸ್ ಪ್ರಭು, ಪುಲ್ಕೇರಿ ಸಭಾಸ್ ಕಾಮತ್, ರಾಜೇಶ್ ರಾವ್ ಪರಪು, ಚಂದ್ರಹಾಸ ಸುವರ್ಣ ಉಪಸ್ಥಿತರಿದ್ದರು. ಬಳಿಕ ನಿನಾಸಂ ತಿರುಗಾಟ ಹೆಗ್ಗೋಡು ತಂಡದಿಂದ ಮಂಜು ಕೊಡಗು ನಿರ್ದೇಶನದ ಗುಣಮುಖ ನಾಟಕ ಪ್ರದರ್ಶನಗೊಂಡಿತು.

ಸಾರಿಗೆ ಸಚಿವರಿಗೆ ಮನವಿ
ಪುತ್ತೂರು, ಜ.12: ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕು ಮತ್ತು ಏರಿಕೆಯಾದ ಸಾರ್ವಜನಿಕರ ಬಸ್ ಪಾಸ್ ದರವನ್ನು ಕಡಿತಗೊಳಿಸಬೇಕು ಹಾಗೂ ಇನ್ನಿತರ ಸಾರಿಗೆ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಪುತ್ತೂರು ಎನ್‌ಎಸ್‌ಯುಐ ಮುಖಂಡರು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಗೆ ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಎನ್‌ಎಸ್‌ಯುಐ ಮುಖಂಡ ಇಬ್ರಾಹೀಂ ಬಾತಿಷ್ ಆತೂರು, ಮಂಗಳೂರು ವಿವಿ ಸರ್ವ ಕಾಲೇಜು ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ ಸಾದಿಕ್ ಬರೆಪ್ಪಾಡಿ, ಪುತ್ತೂರು ಎನ್‌ಎಸ್‌ಯುಐ ಉಸ್ತುವಾರಿ ಜಾಸಿಂ ಕಣ್ಣೂರು, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಷದ್ ದರ್ಬೆ, ರಿಸರ್ವ್ ಬ್ಯಾಂಕ್ ನಿರ್ದೇಶಕ ನವೀನ್ ಭಂಡಾರಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಹನೀಫ್ ಮಾಡಾವು, ಹರೀಶ್ ನಿಡ್ಪಳಿ, ಸುಳ್ಯ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹನೀಫ್ ಪುಂಚತ್ತಾರು, ಯುವ ಕಾಂಗ್ರೆಸ್‌ನ ಸಿದ್ದೀಕ್ ಕೂಡುರಸ್ತೆ ಮತ್ತಿತರರು ಉಪಸ್ಥಿತರಿದ್ದರು.

ನುಡಿನಮನ ಕಾರ್ಯಕ್ರಮ

ಮೂಡುಬಿದಿರೆ, ಜ.12: ಕಾಂತಾವರ ಕನ್ನಡ ಸಂಘದ ತಿಂಗಳ ‘ನುಡಿನಮನ’ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಡಾ.ಬಿ.ಪಿ. ಸಂಪತ್‌ಕುಮಾರ್ ‘ಬೆಟಗೇರಿ ಕೃಷ್ಣಶರ್ಮ ಅವರ ಕವನಗಳ ಹೊಸ ಓದು’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ಸದಾನಂದ ನಾರಾವಿ ವಂದಿಸಿದರು.

ಉಡುಪಿ: ‘ಕಾರ್ಟೂನ್ ಹಬ್ಬ’
ಉಡುಪಿ, ಜ.12: ಪೇಜಾವರ ಪರ್ಯಾಯೋತ್ಸವದ ಅಂಗವಾಗಿ ‘ಕಾರ್ಟೂನ್ ಕುಂದಾಪ್ರ’ ಕಾರ್ಟೂನ್ ಕುಂದಾಪ್ರವು ಜ.17 ಮತ್ತು 18ರಂದು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಚಾರಿಟೀಸ್‌ನ ಸಹಯೋಗದೊಂದಿಗೆ ಉಡುಪಿಯ ಶೋಕಮಾತಾ ಇಗರ್ಜಿ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ‘ಕಾರ್ಟೂನ್ ಕುಂದಾಪ್ರ’ವನ್ನು ಆಯೋಜಿಸಲಿದೆ ಎಂದು ಕಲಾವಿದ ಸತೀಶ್ ಆಚಾರ್ಯ ತಿಳಿಸಿದ್ದಾರೆ.
ಪ್ರೊ-ಡಿಜಿ ಕಾರ್ಟೂನ್ ಹಬ್ಬವನ್ನು ಮಣಿಪಾಲ ಎಂಐಟಿ ನಿರ್ದೇಶಕ ಪ್ರೊ.ಜಿ.ಕೆ.ಪ್ರಭು ಜ.17ರ ಪೂರ್ವಾಹ್ನ 11:30ಕ್ಕೆ ಉದ್ಘಾಟಿಸಲಿದ್ದಾರೆ. ಶೋಕಮಾತಾ ಇಗರ್ಜಿಯ ಧರ್ಮಗುರು ವಂ.ಫ್ರೆಡ್ ಮಸ್ಕರೇನ್ಹಸ್, ಲೇಖಕಿ ವನಿತಾ ಪೈ, ಡಾ.ಕಿರಣ್ ಆಚಾರ್ಯ ಉಪಸ್ಥಿತರಿರುವರು. ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ. ಮುಹಮ್ಮದ್ ಮತ್ತು ಪಂಜು ಗಂಗೊಳ್ಳಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಸಾರ್ವಜನಿಕರಿಗೆ ಕ್ಯಾರಿಕೇಚರ್ ರಚನಾ ಸ್ಪರ್ಧೆ, ಡೈಲಾಗ್ ಬರೆಯೋ ಸ್ಪರ್ಧೆ, ಸೆಲ್ಫಿ ಕಾರ್ನರ್ ಸ್ಪರ್ಧೆಗಳಿವೆ. ವ್ಯಂಗ್ಯಚಿತ್ರ ರಚನಕಾರರಿಂದ ಸ್ಥಳದಲ್ಲೇ ಕ್ಯಾರಿಕೇಚರ್ ರಚನೆ ನಡೆಯಲಿದೆ.ಆಶಾನಿಲಯಕ್ಕೆ ನಿಧಿ ಸಂಗ್ರಹ: ಕಾರ್ಟೂನ್ ಹಬ್ಬದಲ್ಲಿ ನಾಡಿನ 16 ಮಂದಿ ವೃತ್ತಿಪರ ಹಾಗೂ ಹವ್ಯಾಸಿ ವ್ಯಂಗ್ಯಚಿತ್ರಕಾರರ 120ಕ್ಕೂ ಅಧಿಕ ವ್ಯಂಗ್ಯಚಿತ್ರಗಳ ಪ್ರದರ್ಶನವಿದೆ. ಜ.18ರ ಸಂಜೆ ಕ್ಯಾರಿಕೇಚರ್‌ಗಳನ್ನು ರಚಿಸಿ ಸಂಗ್ರಹಿಸಲಾಗುವ ಮೊತ್ತವನ್ನು ಉಡುಪಿಯ ವಿಶೇಷ ಮಕ್ಕಳ ಶಾಲೆ ‘ಆಶಾ ನಿಲಯ’ದ ನವೀಕರಣಕ್ಕಾಗಿ ನೀಡಲಾಗುವುದು. ಎರಡೂ ದಿನಗಳ ಕಾಲ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಕಾರ್ಟೂನ್‌ಗೆ ಸಂಬಂಧಿಸಿ ಪುಸ್ತಕ ಹಾಗೂ ವಿವಿಧ ವಸ್ತುಗಳ ಮಾರಾಟವೂ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕ, ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ನುಡಿದರು. ರಾಜಾರಾಂ ತಲ್ಲೂರು ಉಪಸ್ಥಿತರಿದ್ದರು.

ಜ.15: ‘ಜೈ ತುಳುನಾಡ್’ ತೆರೆಗೆ
ಮಂಗಳೂರು,ಜ.12: ರ್‌ನ್ಸ್ ಮೂವಿ ಇಂಟರ್‌ನ್ಯಾಶನಲ್ ಅರ್ಪಿಸುವ ‘ಜೈ ತುಳುನಾಡ್’ ತುಳು ಚಲನಚಿತ್ರ ಜ.15ರಂದು ಮಂಗಳೂರಿನ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರ ನಿರ್ಮಾಪಕ ್ರಾಂಕ್ ೆರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯಾಗಬೇಕೆಂದು ಕನಸು ಹೊತ್ತಿದ್ದ ವ್ಯಕ್ತಿಯೊಬ್ಬ ತನಗೆ ಅದು ಸಾಧ್ಯವಾಗದಿದ್ದಾಗ ತನ್ನ ಮಗನಲ್ಲಿ ಆ ಕನಸನ್ನು ತುಂಬಿ ಮಗನನ್ನು ದಕ್ಷ ಪೊಲೀಸ್ ಅಧಿಕಾರಿಯನ್ನಾಗಿ ಮಾಡುವುದರ ಸುತ್ತ ಚಿತ್ರದ ಕತೆ ಸಾಗುತ್ತದೆ. ಅವಿನಾಶ್ ಶೆಟ್ಟಿ ನಾಯಕನಾಗಿ, ಸೋನಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರವು 7 ಹಾಡುಗಳನ್ನು ಒಳಗೊಂಡಿದೆ. ಶ್ರೇಯಾ ಅಂಚನ್, ಅರವಿಂದ ಬೋಳಾರ್, ಹಿರಿಯ ನಟಿ ಭವ್ಯಾ, ಸರೋಜಿನಿ ಶೆಟ್ಟಿ, ಮನಮೋಹನ್ ರೈ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಜ.14ರಂದು ಪಿವಿಆರ್ ಚಿತ್ರಮಂದಿರದಲ್ಲಿ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ನಿರ್ದೇಶಕ ಪ್ರವೀಣ್, ಸಹ ನಿರ್ಮಾಪಕ ನಂದಿಹಳ್ಳಿ ಶಿವಣ್ಣ, ನಾಯಕ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

ಸರಕಾರಿ ಕಾಲೇಜಿಗೆ ಅನುದಾನ ಬಿಡುಗಡೆ
 ಸುಳ್ಯ, ಜ.12: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ರಾಷ್ಟ್ರೀಯ ’ಉಚ್ಚತರ’ ಶಿಕ್ಷಾ ಅಭಿಯಾನ ಕಾರ್ಯಕ್ರಮದ 2015-16ನೆ ಸಾಲಿನಲ್ಲಿ ಕಾಂಪೊನೆಂಟ್ 07ರ ಅಡಿಯಲ್ಲಿ ಬೆಳ್ಳಾರೆ ಡಾ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕೇಂದ್ರ ಸರಕಾರ 1.90 ಕೋಟಿ ರೂ. ಬಿಡುಗಡೆಗೊಳಿಸಿದೆ.
ಶಾಸಕ ಎಸ್.ಅಂಗಾರ ಹಾಗೂ ಸಂಸದ ನಳಿನ್‌ಕುಮಾರ್ ಕಟೀಲ್‌ರವರ ಶಿಫಾರಸಿನನ್ವಯ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆಗೊಳಿಸಿದೆ ಎಂದು ಬಿಜೆಪಿ ಪ್ರಕಟನೆ ತಿಳಿಸಿದೆ.

ಬಂಗ್ಲೆಗುಡ್ಡೆ: ಸ್ಪೋರ್ಟ್ಸ್ ಕ್ಲಬ್ ಸದಸ್ಯರಿಂದ ತ್ಯಾಜ್ಯ ತೆರವು
ವಿಟ್ಲ, ಜ.12: ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಬಂಗ್ಲೆಗುಡ್ಡೆ ಶಾರದಾ ಪ್ರೌಢಶಾಲಾ ಬಳಿ ಕೆಲವು ತಿಂಗಳುಗಳಿಂದ ವಿಲೇವಾರಿಯಾಗದೆ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಕೊನೆಗೂ ನಂದಾವರ ರೋಯಲ್‌ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ತೆರವುಗೊಳಿಸಿ ಪರಿಸರದ ಸ್ವಚ್ಛತೆಯನ್ನು ಕಾಪಾಡಿದ್ದಾರೆ.ಸಾರ್ವಜನಿಕರು ವಾಹನಗಳಲ್ಲಿ ಕಸ-ತ್ಯಾಜ್ಯಗಳನ್ನು ಶಾಲೆ ಬಳಿ ಎಸೆದು ಹೋಗುವುದರಿಂದ ಹಲವು ಸಮಯಗಳಿಂದ ಈ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಬಿದ್ದು ದುರ್ನಾತ ಬೀರುತ್ತಿತ್ತು. ಇದನ್ನು ನಾಯಿ-ಜಾನುವಾರುಗಳು ತಿಂದು ಎಲ್ಲೆಂದರಲ್ಲಿ ಎಳೆದಾಡಿ ಹಾಕುತ್ತಿದ್ದ ಪರಿಣಾಮ ಇಡೀ ಪರಿಸರವೇ ಕೊಳೆತು ಗಬ್ಬು ವಾಸನೆ ಬರುವಂತಾಗಿತ್ತು. ಈ ಬಗ್ಗೆ ಈಗಾಗಲೇ ಪರಿಸರವಾಸಿಗಳು ಹಲವು ಬಾರಿ ಪುರಸಭಾಧಿಕಾರಿಗಳಿಗೆ ಲಿಖಿತ ಹಾಗೂ ವೌಖಿಕ ದೂರು ನೀಡಿದ್ದರೂ ಯಾವುದೇ ಕ್ರಮ ಜರಗಿಸಿರಲಿಲ್ಲ. ಇದನ್ನು ಮನಗಂಡ ರೋಯಲ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ್ದಲ್ಲದೆ ಕಸ-ಕಡ್ಡಿ, ತ್ಯಾಜ್ಯಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕುವ ಮೂಲಕ ಪರಿಸರ ಸ್ವಚ್ಛಗೊಳಿಸಿದ್ದಾರೆ. ಅಲ್ಲದೆ ತ್ಯಾಜ್ಯ ಎಸೆಯದಂತೆ ಸೂಚನಾ ಫಲಕವನ್ನೂ ತಾವೇ ಅಳವಡಿಸಿ ಗಮನ ಸೆಳೆದಿದ್ದಾರೆ.

ಮುಂಡಾಲ ಸಮಾಜ ಬಾಂಧವರ ಕಬಡ್ಡಿ ಪಂದ್ಯ: ಉಳ್ಳಾಲ ಫ್ರೆಂಡ್ಸ್ ತಂಡಕ್ಕೆ ಪ್ರಶಸ್ತಿ

ಮಂಗಳೂರು, ಜ.12: ಸೂಟರ್‌ಪೇಟೆ ಮುಂಡಾಲ ಸಮಾಜದ ಆಶ್ರಯದಲ್ಲಿ ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಮುಂಡಾಲದ ಸಮಾಜ ಬಾಂಧವರ ಕಬಡ್ಡಿ ಪಂದ್ಯಾಟದಲ್ಲಿ ಉಳ್ಳಾಲ ಗಾಂಧಿನಗರದ ಉಳ್ಳಾಲ ಫ್ರೆಂಡ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಉತ್ತಮ ದಾಳಿಗಾರ ಪ್ರಶಸ್ತಿಯನ್ನು ವಿನೋದ್, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಆನಂದ್ ಹಾಗೂ ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಕಾರ್ತಿಕ್ ಪಡೆದುಕೊಂಡರು. ರಾಷ್ಟ್ರಮಟ್ಟದ ಕಬಡ್ಡಿ ತೀಪುರ್ಗಾರ ರಾಧಾಕೃಷ್ಣ ರೈ ಹರೇಕಳ ಹಾಗೂ ಶರತ್ ಶೆಟ್ಟಿ ಪಂದ್ಯದ ತೀರ್ಪುಗಾರರಾಗಿದ್ದರು. ಮಂಗಳೂರು ಬಾರ್ ಕೌನ್ಸಿಲ್‌ನ ಉಪಾಧ್ಯಕ್ಷ ದಿನಕರ ಶೆಟ್ಟಿ, ಯುವ ವಕೀಲ ಮೋಹನ್‌ದಾಸ್ ರೈ ಹಾಗೂ ದಾವಣಗೆರೆಯ ಎಲ್ಲೈಸಿ ಅಧಿಕಾರಿ ಸುಂದರ್ ಮೇರ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಮುಂಡಾಲ ಸಮಾಜದ ಅಧ್ಯಕ್ಷ ರಮೇಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಭಾಗದ ಭೂನ್ಯಾಯ ಮಂಡಳಿಯ ಸದಸ್ಯ ಸುನೀಲ್ ಆದ್ಯಪಾಡಿ, ಅಖಿಲ ಭಾರತ ಮುಂಡಾಲ ವೇದಿಕೆಯ ಅಧ್ಯಕ್ಷ ಕಿರಣ್‌ಕುಮಾರ್, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಕೆ.ಪೇಜಾವರ, ಜಯಂತ್ ಮಾಸ್ಟರ್, ಶ್ರೀನಿವಾಸ್ ಎಕ್ಕೂರು, ಐಟಿಐ ನಿವೃತ್ತ ಪ್ರಾಂಶುಪಾಲ ಸದಾನಂದ ಎಸ್., ಮಾಜಿ ಕಬಡ್ಡಿ ಆಟಗಾರ ಯಶೋಧರ, ರಮೇಶ್‌ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಜೀವ ಎಸ್., ವೆಂಕಪ್ಪ ಮೇಸ್ತ್ರಿ, ಭರತ್ ಕುಮಾರ್ ಎಸ್., ಜನಾರ್ದನ ಎಸ್., ಸಂತೋಷ್ ಕೋಟ್ಯಾನ್, ರಘುವೀರ್ ಎಸ್., ಅರುಣ್‌ರಾಜ್, ತಿಲಕ್ ಕುಮಾರ್, ಗಣೇಶ್ ಕರ್ಕೇರ, ಸಬಿತ್ ಸಾಲ್ಯಾನ್, ದಯಾನಂದ್, ಸಂಧ್ಯಾ, ರವೀಂದ್ರ ಎಸ್., ಶಂಕರ, ಜಯಂತ, ಜಗದೀಶ್, ಸುಧಾಕರ್, ಸುದರ್ಶನ್, ಸುಧೀರ್, ಹರೀಶ್ ಕಲಾಂಜಲಿ, ಪ್ರಶಾಂತ್ ಉಪಸ್ಥಿತರಿದ್ದರು. ವೆಂಕಟೇಶ್ ಸಾಲ್ಯಾನ್ ಸ್ವಾಗತಿಸಿದರು. ಸೋಮಶೇಖರ್ ವಂದಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

ಹೆಜಮಾಡಿ ಗ್ರಾಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ

ಪಡುಬಿದ್ರೆ, ಜ.12 : ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನಿಗದಿತ ಸಮಯಕ್ಕೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದರಿಂದ ಸಿಡಿಮಿಡಿಗೊಂಡ ಗ್ರಾಮಸ್ಥರು ದಿಢೀರನೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು. ಆಕ್ರೋಶಕ್ಕೆ ಬೆದರಿದ ಆಡಳಿತವು ಸಾಮಾನ್ಯ ಸಭೆಯನ್ನು ನಡೆಸಿ ಗಮನ ಸೆಳೆದಿದೆ.ವಿವಿಧ ನೆಪವೊಡ್ಡಿ ಕಳೆದ ನಾಲ್ಕು ತಿಂಗಳಿಂದ ಹೆಜಮಾಡಿ ಗ್ರಾಪಂ ಮಾಸಿಕ ಸಭೆ ರದ್ದಾಗುತ್ತಾ ಬಂದಿತ್ತು. ಗುರುವಾರ ಮಾಸಿಕ ಸಭೆಗೆ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ ಕೆಲವು ಸದಸ್ಯರು ವಿವಿಧ ನೆಪವೊಡ್ಡಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದಿದ್ದರು. ಇದೇ ವೇಳೆ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪಂಚಾಯತ್‌ಗೆ ಆಗಮಿಸಿದ್ದ ಸ್ಥಳೀಯರು ಗ್ರಾಪಂ ಸದಸ್ಯರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ದಲಿತ ನಾಯಕ ಶೇಖರ ಹೆಜಮಾಡಿ ನೇತೃತ್ವದಲ್ಲಿ ಸಭೆ ರದ್ದುಗೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ದಿಢೀರ್‌ಮುಷ್ಕರದಿಂದ ಬೆದರಿದ ಸದಸ್ಯರುಮಾಸಿಕ ಸಭೆ ಮುಂದುವರಿಸಿದರು.ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಶೇಖರ ಹೆಜಮಾಡಿ, ಗ್ರಾಮದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಜನರಿಂದ ಆಯ್ಕೆಗೊಂಡ ಸದಸ್ಯರು ನೆಪವೊಡ್ಡಿ ಸಭೆ ಬಹಿಷ್ಕರಿಸುವುದು ಖಂಡನೀಯ. ಇಂಥಹ ಸದಸ್ಯರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X