Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಇವರನ್ನು ಎರಡು ನಾಲಿಗೆಯ...

ಇವರನ್ನು ಎರಡು ನಾಲಿಗೆಯ ಸಂಸದರೆನ್ನಬಹುದೆ?

ಹಾರೋಹಳ್ಳಿ ರವೀಂದ್ರ,ಹಾರೋಹಳ್ಳಿ ರವೀಂದ್ರ,12 Jan 2016 11:43 PM IST
share

ಮೈಸೂರು ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹ ಬಿಜೆಪಿಯಿಂದ ಸಂಸದರಾಗಿದ್ದಾರೆ. ಇವರು ಸಂಸದರಾದಾಗಿನಿಂದ ಮೈಸೂರಿನಲ್ಲಿ ಜಾತಿವಾದಿ ರಾಜಕಾರಣ ಪ್ರಾರಂಭವಾಗಿ ಸಾಂಸ್ಕೃತಿಕ ನಗರಕ್ಕೆ ಕಳಂಕವಾಗಿರುವುದಂತು ಸುಳ್ಳಲ್ಲ. ‘ಬೆತ್ತಲೆ ಜಗತ್ತು’ ಕಾಲಂ ಅಡಿಯಲ್ಲಿ ಬರೆಯುತ್ತಿದ್ದ, ಹಾಗೂ ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಮತ್ತು ಯಾವುದರ ವಿರುದ್ಧ ಮಾತನಾಡಿದ್ದರೋ ಅದನ್ನೇ ಒಪ್ಪಿಕೊಂಡು ರಾಜಿಗೆ ಮುಂದಾಗಿ ತನ್ನ ನಾಲಿಗೆಯನ್ನೆ ಸೀಳಿ ಎರಡು ಮಾಡಿಕೊಂಡು ಬದುಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೈಸೂರಲ್ಲೊಂದು ಬೆಳವಣಿಗೆ ಉಂಟಾಗಿದೆ. ಅದೇನೆಂದರೆ ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಈಗೊಂದು ಪ್ರಕರಣ ಜರುಗಿದೆ. ಅಲ್ಲಿನ ನಿರ್ದೇಶಕರಾದ ಪ್ರೊ. ರಾಮ್ ರಾಜಶೇಖರನ್ ಎಂಬವರು ಕನ್ನಡ ವಿರೋಧಿ ಕೆಲಸ ಮಾಡುತ್ತಿದ್ದಾರೆಂದು ಕನ್ನಡ ಸಂಘಟನೆಗಳಿಂದ ಸದ್ದಾಗಿ ಅಲ್ಲಿಯೇ ತಣ್ಣಗಾಗಿತ್ತು. ಆದರೆ ಪ್ರತಾಪ್ ಸಿಂಹರ ನಂತರ ಇದು ಜಾತಿವಾದದ ನೆಲೆಗೆ ತಿರುಗಿಕೊಂಡಿದೆ. ಸಂಸದರಾದ ಪ್ರತಾಪ್ ಸಿಂಹ ಅವರು ಸಿಎಸ್‌ಐಆರ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಇವರು ಹೀಗೆ ಹೇಳುತ್ತಾರೆ ‘‘ಸಿಎಫ್‌ಟಿಆರ್‌ಐ ನಿರ್ದೇಶಕರ ನೇಮಕದಿಂದ ಹಿಡಿದು, ಸಂಸ್ಥೆಯಲ್ಲಿನ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ನೇಮಕಾತಿಯಲ್ಲಿ ನಡೆಸಿರುವ ಅವ್ಯವಹಾರ, ಅಧಿಕಾರ ದುರುಪಯೋಗ ಮುಂತಾದವು ನಡೆದಿವೆ’’ ಎಂದು ಹೇಳುತ್ತಾರೆ. ಆದರೆ ಸಂಸದರ ವ್ಯಾಪ್ತಿಯಲ್ಲಿ ಸಿಎಫ್‌ಟಿಆರ್‌ಐ ಬಿಟ್ಟು ಮತ್ತೆಲ್ಲೂ ಅವ್ಯವಹಾರ, ಅಧಿಕಾರ ದುರುಪಯೋಗ ನಡೆದಿಲ್ಲವೆ? ಅವೆಲ್ಲವನ್ನೂ ಬಿಟ್ಟು ಸಿಎಫ್‌ಟಿಆರ್‌ಐ ನಿರ್ದೇಶಕರನ್ನು ಮಾತ್ರ ಗುರಿಯಾಗಿಸಿಕೊಂಡಿರುವುದೇಕೆ? ಪ್ರಸ್ತುತದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕುಲಪತಿಯಾಗಿರುವ ಪ್ರೊ.ಕೆ.ಎಸ್.ರಂಗಪ್ಪನವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ನೇಮಕಾತಿ, ಕಾಮಗಾರಿಗೆ ಸಂಬಂಧಿಸಿದಂತೆ ಕೋಟ್ಯಂತರ ರೂ ಭ್ರಷ್ಟಾಚಾರ ನಡೆದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹುದ್ದೆಗಳ ನೇಮಕ ವಿಚಾರಕ್ಕೆ ಸಂಬಂಧಿಸಿದ ಹಗರಗಣಗಳ ಬಗ್ಗೆ ಹಾಗೂ ಕಟ್ಟಡ ಕಾಮಗಾರಿ, ಭಡ್ತಿ, ಪ್ರಾದೇಶಿಕ ಕೇಂದ್ರಗಳನ್ನು ತೆರೆದಿದ್ದು, ಯುಜಿಸಿ ನಿಯಮಾವಳಿಯನ್ನೇ ಗಾಳಿಗೆ ತೂರಿ ಮನಸೋ ಇಚ್ಛೆ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದು ಮುಂತಾದ ಹಗರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯಪಾಲರು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧಿಶ ಕೆ. ಭಕ್ತವತ್ಸಲ ಅವರ ಏಕ ಸದಸ್ಯ ವಿಚಾರಣ ಆಯೋಗ ವನ್ನು ರಚಿಸಿದ್ದರು. ಅದರ ತನಿಖೆಯು ಚುರುಕಾಗಿ ನಡೆದು ಸರಕಾರಕ್ಕೆ ಮತ್ತು ರಾಜ್ಯಪಾಲರ ಕಛೇರಿಗೆ ವರದಿ ಸಲ್ಲಿಸಲಾಗಿದೆ. ವರದಿ ಜಾರಿಗೊಳಿಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಮೈಸೂರಿನಲ್ಲಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಸಂಘಟಕರ ಸಹಿತವಾಗಿ ಸಾಕಷ್ಟು ಪ್ರತಿಭಟನೆ ಗಳು ನಡೆದರೂ ಅದಕ್ಕೆ ಕಿವಿಗೊಡದೆ ಏಕಾಏಕಿ ರಾಜಶೇಖರನ್ ವಿರುದ್ಧ ತಿರುಗಿ ಬಿದ್ದಿದ್ದು ಏಕೆ? ಒಬ್ಬ ಪ್ರಾಮಾಣಿಕ ಸಂಸದರಾಗಿದ್ದರೆ ಇಂತಹ ಇಬ್ಬಂದಿತನವನ್ನು ಮಾಡುತ್ತಿದ್ದರೆ? ಸಿಎಫ್‌ಟಿಆರ್‌ಐನ ನಿರ್ದೇಶಕರಾದ ಪ್ರೊ.ರಾಮ್ ರಾಜಶೇಖರನ್ ವಿರುದ್ಧ ಸಿಎಸ್‌ಐಆರ್‌ನ ಮಹಾನಿರ್ದೇಶಕರಿಗೆ ಏಕಾಏಕಿ ಪತ್ರ ಬರೆದ ಹಾಗೆ, 40ಕ್ಕೂ ಹೆಚ್ಚು ಆರೋಪಗಳಿರುವ ಪ್ರೊ. ಕೆ.ಎಸ್.ರಂಗಪ್ಪನವರ ಬಗ್ಗೆ ರಾಜ್ಯಪಾಲರಿಗೆ ಇದೇ ಸಂಸದರು ಏಕೆ ಪತ್ರ ಬರೆದಿಲ್ಲ?. ಪ್ರೊ. ಕೆ.ಎಸ್.ರಂಗಪ್ಪನವರು ಸ್ವಜಾತಿಯವರು ಎಂಬ ಒಂದೇ ಕಾರಣಕ್ಕೆ ಪ್ರತಾಪ್ ಸಿಂಹ, ಅವರ ಅಧಿಕಾರ ದುರುಪಯೋಗದ ಬಗ್ಗೆ ಎಂದೂ ಮಾತನಾಡದೆ ಮೌನ ತಾಳಿದ್ದಾರೆ. ಆದರೆ ಸಿಎಫ್‌ಟಿಆರ್‌ಐನ ನಿರ್ದೇಶಕರಾದ ಪ್ರೊ. ರಾಮ್ ರಾಜಶೇಖರನ್ ಅವರು ದಲಿತ ಜನಾಂಗಕ್ಕೆ ಸೇರಿದವರೆಂಬ ಕಾರಣಕ್ಕೆ ಸಂಸದರು ತಿರುಗಿಬಿದ್ದಿದ್ದಾರೆ. ಮೈಸೂರಿಗೆ ಅದರದೇ ಆದ ಪರಂಪರೆ ಸಾಂಸ್ಕೃತಿಕ ಹಿನ್ನೆಲೆ ಇದೆ. ಹಿಂದಿನಿಂದಲೂ ಸಾಮಾಜಿಕ ನ್ಯಾಯದ ತವರೂರು ಎಂದು ಕರೆಯಲ್ಪಡುವ ಮೈಸೂರು, ಇಲ್ಲಿರುವ ಜನತೆ ಅದನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಿಂದ ಚುನಾಯಿತರಾದ ಪ್ರತಾಪ್ ಸಿಂಹರು ಇಡೀ ಪರಂಪರೆಯನ್ನು ಜಾತಿಯಿಂದಲೇ ನೋಡುವ, ಧರ್ಮದ ಹಿನ್ನೆಲೆಯಲ್ಲೆ ಕಾಣುವ ಪರಿಪಾಠವನ್ನು ಮುಗ್ಧಜನರಿಗೆ ಕಲಿಸಲು ಮುಂದಾಗಿದ್ದಾರೆ. ಚುನಾವಣೆಯಲ್ಲಿ ಜಯಭೇರಿ ಸಾಧಿಸಿ ಸಂಸದರಾದ ಮೇಲೆ ಮೈಸೂರನ್ನು ಪ್ಯಾರಿಸ್ ಮಾಡುವೆ ಎಂದು ಹೇಳಿಕೆ ಕೊಟ್ಟಿದ್ದು ನಿಮಗೆ ಮರೆತು ಹೋಗಿದೆಯೆ? ಮೊದಲು ತಾವು ಹೇಳಿದ ಕೆಲಸವನ್ನು ಪೂರ್ಣಗೊಳಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗುತ್ತದೆ. ಆದರೆ ದಮನಿತ ಜನಾಂಗವನ್ನೇ ಮತ್ತೆ ಧಮನಿಸಲು ಬರೆದ ಪತ್ರ ಜಾತಿರಾಜಕಾರಣದ ಹಿತಾಸಕ್ತಿಯೆ ಹೊರತು, ದೇಶದ ಸಮ ಸಮಾಜವನ್ನು ನಿರ್ಮಿಸಲು ಎಂದೂ ಉಪಪಯೋಗವಾಗಲಾರದು.

share
ಹಾರೋಹಳ್ಳಿ ರವೀಂದ್ರ,
ಹಾರೋಹಳ್ಳಿ ರವೀಂದ್ರ,
Next Story
X