ಉಡುಪಿ: ಚಿತ್ರರಚನೆಯ ಮೂಲಕ ಪರ್ಯಾಯ ಸಂಭ್ರಮ

ಉಡುಪಿ, ಜ.12: ಪೇಜಾವರ ಸ್ವಾಮೀಜಿಯವರ ಐದನೆ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ಅಂಬಾಗಿಲಿನ ಗೆರೆಬರೆ ಚಿತ್ರಕಲಾ ತರಬೇತಿ ಕೇಂದ್ರದ ಮಕ್ಕಳು ಶ್ರೀಕೃಷ್ಣನ ಜಲವರ್ಣ ಚಿತ್ರಗಳ ರಚನೆಯ ಮೂಲಕ ಸಂಭ್ರಮಿಸಿದರು. ಪರ್ಯಾಯದ ಪೂರ್ವಭಾವಿಯಾಗಿ ಮತ್ತು ಗೆರೆಬರೆಯ 11ನೆ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಈ ಕಾರ್ಯಾಗಾರದಲ್ಲಿ ಮಕ್ಕಳು ‘ಒಟ್ಟಿಗೆ ಬರೆಯೋಣ... ಶ್ರೀಕೃಷ್ಣಾ...’ಎಂಬ ಶೀರ್ಷಿಕೆಯಡಿ ಏಕಕಾಲದಲ್ಲಿ ಒಂದೇ ಬಗೆಯ ಮೇಘವರ್ಣನನ್ನು ರಚಿಸಿದರು. ಕಲಾಕಾಣಿಕೆಯಾಗಿ 25 ಚಿತ್ರಗಳು ಮೂಡಿಬಂದವು. ಕಾರ್ಯಾಗಾರವನ್ನು ಗೆರೆಬರೆ ನಿರ್ದೇಶಕ ಜೀವನ್ ಶೆಟ್ಟಿ ನಡೆಸಿಕೊಟ್ಟರು. ಉತ್ತಮ ಚಿತ್ರ ರಚಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಜ್ಞಾ ಶೆಟ್ಟಿ ಬಹುಮಾನಗಳನ್ನು ವಿತರಿಸಿದರು. ಪ್ರಾಂಶುಪಾಲ ಸುಧೀಂದ್ರ ಗಾಂವ್ಕರ್, ಕಲಾಶಿಕ್ಷಕರಾದ ಅಶೋಕ್ ಶೇಟ್, ದೀಪಿಕಾ, ಸೌಂದರ್ಯ ಉಪಸ್ಥಿತರಿದ್ದರು.
Next Story





