ಬೊಕೊ ಹರಾಂ ಉಗ್ರರಿಂದ 7 ಮಂದಿಯ ಹತ್ಯೆ
ಕಾನೊ (ನೈಜೀರಿಯ), ಜ. 12: ಬೊಕೊ ಹರಾಂ ಭಯೋತ್ಪಾದಕರು ಈಶಾನ್ಯ ನೈಜೀರಿಯದಲ್ಲಿ ಬುಡಕಟ್ಟು ಪಂಗಡಗಳ ಮೇಲೆ ದಾಳಿ ನಡೆಸಿ ಏಳು ಮಂದಿಯನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಡಮಾವ ರಾಜ್ಯದ ಉತ್ತರ ಭಾಗದಲ್ಲಿರುವ ಮಡಗಲಿ ಪಟ್ಟಣದಲ್ಲಿ ರವಿವಾರ ಸಂಜೆ ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆ. ಸೇನೆಯು ಭಯೋತ್ಪಾದಕರ ವಿರುದ್ಧ ಪ್ರತಿ ದಾಳಿ ನಡೆಸುತ್ತಿದ್ದರೂ, ಈ ರಾಜ್ಯವನ್ನೇ ಗುರಿಯಿರಿಸಿ ಬೊಕೊ ಹರಾಂ ಉಗ್ರರು ದಾಳಿ ನಡೆಸುತ್ತಿದ್ದಾರೆ.
‘‘ಅವರು ಏಳು ಜನರನ್ನು ಕೊಂದರು ಹಾಗೂ 10 ಮನೆಗಳನ್ನು ಸುಟ್ಟರು’’ ಎಂದು ಮಡಗಲಿ ಸ್ಥಳೀಯಾಡಳಿತ ಸಂಸ್ಥೆಯ ಮಾಜಿ ಅಧ್ಯಕ್ಷ ಮೈನ ಉಲರಮು ತಿಳಿಸಿದರು. ಬಳಿಕ ಸೈನಿಕರು ಉಗ್ರರನ್ನು ಸಮೀಪದ ಕಾಡಿಗಟ್ಟಿದರು ಎಂದರು.
Next Story





