ರಾಜ್ಯದೆಲ್ಲೆಡೆ ಜಾರಿಗೆ ಬರಲಿ
ಮಾನ್ಯರೆ,
ರಾಜ್ಯದ ಕೆಲವೆಡೆ ದ್ವಿಚಕ್ರವಾಹನ ಸವಾರರು ಮತ್ತು ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಇಬ್ಬರ ಜೀವವುಳಿಸುವ ಸರಕಾರದ ಈ ಹೆಜ್ಜೆ ಮೆಚ್ಚತಕ್ಕದ್ದೆ.
ಆದರೆ ರಾಜ್ಯದ ಹೆಚ್ಚಿನ ಕಡೆ ಇನ್ನೂ ಮುಂಬದಿ ಸವಾರರಿಗೆ ಕೂಡಾ ಹೆಲ್ಮೆಟ್ ಜಾರಿಯಾಗಿಲ್ಲ. ಅಂದರೆ ಅಲ್ಲೆಲ್ಲ ಅವಘಡಗಳಾಗಿ ಜೀವ ಹಾನಿಯಾಗುವುದೇ ಇಲ್ಲವೇ?
ಹೆಲ್ಮೆಟ್ ಜಾರಿ ಕಾನೂನನ್ನು ಜಾರಿಗೊಳಿಸುವಾಗ ರಾಜ್ಯದೆಲ್ಲೆಡೆಯ ದ್ವಿಚಕ್ರವಾಹನ ಸವಾರರ ಜೀವರಕ್ಷಣೆಯ ಬಗ್ಗೆ ಗಮನ ನೀಡಬೇಕಲ್ಲವೇ?
Next Story





