ಮಂಗಳೂರು: ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ
.gif)
ಮಂಗಳೂರು, ಜ.12: ಜಾಗತಿಕವಾಗಿ ಭಾರತದ ಘನತೆಯನ್ನು ಎತ್ತಿಹಿಡಿದ ವ್ಯಕ್ತಿ ಸ್ವಾಮಿ ವಿವೇಕಾನಂದರು. ಭಾರತೀಯ ತತ್ವಶಾಸ್ತ್ರದ ರಾಯಭಾರಿಯಾಗಿರುವ ಅವರು ಜಗತ್ತಿನ ಅಪ್ರತಿಮ ವ್ಯಕ್ತಿ. ಯುಗ ಪುರುಷ ವಿವೇಕಾನಂದರು ಕೇವಲ ಭಾರತೀಯರಿಗಲ್ಲದೆ ವಿದೇಶಿ ಯುವಜನರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದರು.
ಅವರು ಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಜ.18ರವರೆಗೆ ಆಯೋಜಿಸಲಾದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಮಾಧವ ಭಟ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉದಯಕುಮಾರ್, ವಿದ್ಯಾರ್ಥಿ ಸಂಘ ಉಪನಿರ್ದೇಶಕ ಡಾ.ಎ.ಹರೀಶ್, ವಿದ್ಯಾರ್ಥಿ ಮುಖಂಡರಾದ ಸೀತಾರಶ್ಮಿ ಎಂ., ನವೀನ್ ಸಫಲ್ಯ, ಲತೇಶ್, ನಿತೀಶ್‌ಕುಮಾರ್, ಸುಪ್ರೀತಾ ಉಪಸ್ಥಿತರಿದ್ದರು.







