‘ಕೊಯ್ಲ ಪಶುಸಂಗೋಪನಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ

ಕಡಬ, ಜ.12: ಕೊಲ ಪಶು ಸಂಗೋಪನಾ ಕೇಂದ್ರದ ಜಮೀನಿನಲ್ಲಿ ಹಾದು ಹೋಗಿರುವ ರಸ್ತೆಯನ್ನು
ಸಾರ್ವಜನಿಕರು ಬಳಕೆ ಮಾಡಿಕೊಳ್ಳುವುದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಮುಚ್ಚಲಾಗಿರುವ ಗೇಟನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ, ಕೊಲ ಪಶುಸಂಗೋಪನಾ ಕೇಂದ್ರದ ಸಹನಿರ್ದೇಶಕ ಡಾ.ರಮೇಶ್ ಕುಮಾರ್‌ರಿಗೆ ಸೂಚಿಸಿದರು. ಕೊಲ ಪಶುಸಂಗೋಪನಾ ಕೇಂದ್ರವು ತನ್ನ ಜಮೀನಿಗೆ ಬೇಲಿ ಹಾಕಿ ಬೀಗ ಜಡಿದಿತ್ತು. ಇದರಿಂದ ಗ್ರಾಮಸ್ಥರು ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಬಳಸಲಾಗದೆ ತೊಂದರೆಗೊಳಗಾಗಿದ್ದರು. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೊಲ ಪಶುಸಂಗೋಪನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜನಪ್ರತಿಧಿಗಳು, ಅಧಿಕಾರಿಗಳು ಹಾಗೂ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಗೇಟು ತೆರವುಗೊಳಿಸುವಂತೆ ಆದೇಶಿಸಿದರ
ಈ ಸಂದರ್ಭ ಶಾಸಕ ಎಸ್ ಅಂಗಾರ, ಜಿಪಂ ಅಧ್ಯಕ್ಷೆ ಆಶಾತಿಮ್ಮಪ್ಪಗೌಡ, ಸದಸ್ಯ ಬಾಲಕೃಷ್ಣ ಬಾಣಜಾಲು, ಪುತ್ತೂರು ಸಹಾಯಕ ಆಯುಕ್ತ ಡಾ. ರಾಜೆಂದ್ರ, ಕಡಬ ವಿಶೇಷ ತಹಶೀಲ್ದಾರ್ ಲಿಂಗಯ್ಯ, ಕಂದಾಯ ನಿರೀಕ್ಷಕ ಕೊರಗಪ್ಪಹೆಗ್ಡೆ, ಪುತ್ತೂರು ಎಪಿಎಂಸಿ ಸದಸ್ಯ ಶೀನಪ್ಪಗೌಡ ವಳಕಡಮ, ಕೊಲ ಗ್ರಾಪಂ ಸದಸ್ಯ ಕೆ.ಎ. ಸುಲೈಮಾನ್, ಕೊಲ ಗ್ರಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ತಾಪಂ ಮಾಜಿ ಸದಸ್ಯ ಧರ್ಮಪಾಲ ರಾವ್ ಕಜೆ, ನ್ಯಾಯವಾದಿ ರವಿಕಿರಣ್ ಕೊಲ ಉಪಸ್ಥಿತರಿದ್ದರು.





