ಅಖಿಲ ಭಾರತ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಮಾಧುರಿ ಆಯ್ಕೆ

ಮಂಗಳೂರು, ಜ.12: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಅಖಿಲ ಭಾರತ ಸಮ್ಮೇಳನ ರಾಜಸ್ತಾನದ ಸಿಖಾರ್‌ನಲ್ಲಿ ನಡೆ ಯಲಿದ್ದು, ಸಮ್ಮೇಳನಕ್ಕೆ ದ.ಕ. ಜಿಲ್ಲೆಯ ಪ್ರತಿನಿಧಿಯಾಗಿ ಮಾಧುರಿ ಬೋಳಾರ್ ಆಯ್ಕೆ ಯಾಗಿದ್ದಾರೆ. ಅವರು ಬಲ್ಮಠ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಎಸ್‌ಎಫ್‌ಐನ ದ.ಕ. ಜಿಲ್ಲಾ ಉಪಾಧ್ಯಕ್ಷೆಯಾಗಿದ್ದಾರೆ.
ಜ.22ರಿಂದ 25ರವರೆಗೆ ನಡೆಯಲಿರುವ ಸಮ್ಮೇಳನಕ್ಕೆ ರಾಜ್ಯ ದಿಂದ 20 ಮಂದಿ ಆಯ್ಕೆಯಾಗಿದ್ದು, ಜಿಲ್ಲೆಯಿಂದ ಮಾಧುರಿ ಬೋಳಾರ್ ಏಕೈಕ ಪ್ರತಿನಿಧಿಯಾಗಿರುತ್ತಾರೆ. ಸಮ್ಮೇಳನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಬಿಕ್ಕಟ್ಟುಗಳು, ಸರಕಾರಗಳ ಶಿಕ್ಷಣ ವಿರೋಧಿ ನೀತಿಗಳು ಮತ್ತು ದೇಶದಲ್ಲಿ ಬಲಿಷ್ಠ ವಿದ್ಯಾರ್ಥಿ ಚಳವಳಿ ರೂಪಿಸುವ ಕುರಿತು ಚರ್ಚೆಯಾಗಲಿದೆ ಎಂದು ಎಸ್‌ಎಫ್‌ಐ ಪ್ರಕಟನೆ ತಿಳಿಸಿದೆ.
Next Story





