ಮಿಜಾರು ಬಳಿ ಗದ್ದೆಗೆ ಉರುಳಿದ ಕಾರು
ಮೂಡುಬಿದಿರೆ, ಜ.12: ರಾಷ್ಟ್ರೀಯ ಹೆದ್ದಾರಿ 169 (ಹಳೆಯ 13) ಹಾದು ಹೋಗುವ ಮಿಜಾರು ಬೆಳ್ಳೆಚಾರು ತಿರುವಿನಲ್ಲಿ ಮೂಡುಬಿದಿರೆಯಿಂದ ಮಂಗಳೂರಿನ ಬೊಂದೆಲ್ ಕಡೆಗೆ ಸಾಗುತ್ತಿದ್ದ ಕಾರೊಂದು ರಸ್ತೆಯಿಂದ ಗದ್ದೆಗೆ ಉರುಳಿದ ಘಟನೆ ಸೋಮವಾರ ತಡರಾತ್ರಿ 2:30ರ ವೇಳೆಗೆ ಸಂಭವಿಸಿದೆ.
ಮಗುಚಿ ಬಿದ್ದ ಕಾರಿನ ಗಾಜು ಒಡೆದು ಒಳಗಿದ್ದ ನಾಲ್ವರು ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆಯ ಸುಧಾಕರ ಪೂಂಜ ಹಾಗೂ ಒಡನಾಡಿಗಳು ಸಹಕರಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅವಘಡಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸುಧಾಕರ ಪೂಂಜಾ, ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಆಗಬೇಕಾಗಿದೆ. ಜನಪ್ರತಿನಿಧಿಗಳು ಈ ಬಗ್ಗೆ ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಹೇಳಿದ್ದಾರೆ.
Next Story





