ಬದಿಯಡ್ಕ, ನೆಲ್ಲಿಕಟ್ಟೆ, ಪೆರ್ಲದಲ್ಲಿ ರಸ್ತೆ ತಡೆ

ಚೆರ್ಕಳ -ಕಲ್ಲಡ್ಕ ರಾಜ್ಯ ಹೆದ್ದಾರಿ ಅವ್ಯವಸ್ಥೆ
ಕಾಸರಗೋಡು, ಜ.12: ಚೆರ್ಕಳ- ಕಲ್ಲಡ್ಕ ರಾಜ್ಯ ಹೆದ್ದಾ ರಿಯ ಅವ್ಯ ವಸ್ಥೆಯ ವಿರುದ್ಧ ವ್ಯಾಪಾರಿ ವ್ಯವಸಾಯಿ ಏಕೋ ಪನ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಜಿಲ್ಲೆಯ ಮೂರು ಕಡೆಗಳಲ್ಲಿ ರಸ್ತೆ ತಡೆ ನಡೆಯಿತು.
ಬದಿಯಡ್ಕ, ನೆಲ್ಲಿಕಟ್ಟೆ, ಪೆರ್ಲ ಪೇಟೆಯಲ್ಲಿ ರಸ್ತೆ ತಡೆ ನಡೆ ಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿ ಸಿದರು. ಬದಿಯಡ್ಕದಲ್ಲಿ ನಡೆದ ಪ್ರತಿಭಟನೆಯನ್ನು ವರ್ತಕರ ಸಂಘದ ಬದಿಯಡ್ಕ ಘಟಕ ಅಧ್ಯಕ್ಷ ಎಸ್.ಎನ್.ಮಯ್ಯ ಉದ್ಘಾಟಿಸಿದರು. ಮುಖಂಡರಾದ ಕುಂಜಾರು ಮುಹಮ್ಮದ್, ಜ್ಞಾನದೇವ ಶೆಣೈ ಉಪಸ್ಥಿತರಿದ್ದರು. ಪೆರ್ಲದಲ್ಲಿ ನಡೆದ ಧರಣಿಯನ್ನು ಅಬ್ದುರ್ರಹ್ಮಾನ್ ಉದ್ಘಾ ಟಿಸಿದರು. ಪ್ರಸಾದ್ ಟಿ., ಬಾಲಕೃಷ್ಣ ಭಟ್, ನೆಲ್ಲಿಕಟ್ಟೆಯಲ್ಲಿ ರಸ್ತೆ ತಡೆಯನ್ನು ಅಬ್ದುಲ್ ಕುಂಞಿ ಉದ್ಘಾಟಿಸಿದರು. ಇಬ್ರಾಹೀಂ, ಅಬೂಬಕರ್ ಉಪಸ್ಥಿತರಿದ್ದರು.
ಚೆರ್ಕಳದಿಂದ ನೆಲ್ಲಿಕಟ್ಟೆ, ಬದಿಯಡ್ಕ, ಪೆರ್ಲ ಮೂಲಕ ಅಡ್ಕಸ್ಥಳ ತನಕದ ಸುಮಾರು 30 ಕಿ.ಮೀ. ರಾಜ್ಯ ಹೆದ್ದಾರಿಯ ಬಹುತೇಕ ರಸ್ತೆಯು ಹೆದೆಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. 10 ವರ್ಷಗಳಿಂದ ಈ ರಸ್ತೆ ಡಾಮರು ಕಂಡಿಲ್ಲ ಹಾಗೂ ದುರಸ್ತಿ ಆಗಿಲ್ಲ. ಇದರಿಂದ ರಸ್ತೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ ಎಂದು ಧರಣಿನಿರತರು ದೂರಿದರು.





