ವ್ಯಾಪಾರಿಯಿಂದ ಚಿನ್ನಾಭರಣ ಲೂಟಿ
ಕಾಸರಗೋಡು, ಜ.12: ಚಿನ್ನ ವ್ಯಾಪಾರಿಯ ಬಳಿಯಿಂದ ಒಂದೂವರೆ ಕಿಲೋ ಚಿನ್ನಾಭರಣ ಲೂಟಿಗೈದ ಘಟನೆ ಕಾಸರಗೋಡು ಹಳೆ ಬಸ್ ನಿಲ್ದಾಣ ಸಮೀಪ ಮಂಗಳವಾರ ರಾತ್ರಿ ನಡೆದಿದೆ.
ತ್ರಿಶೂರಿನ ಟೋನಿ (50) ಲೂಟಿಗೊಳಗಾದವರು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಮೆಹಬೂಬ್ ಥಿಯೇಟರ್ ಬಳಿ ಕಾರಿನಲ್ಲಿ ಬಂದ ತಂಡವೊಂದು ಒಂದೂವರೆ ಕಿಲೋ ಚಿನ್ನ ಇದ್ದ ಬ್ಯಾಗನ್ನು ಲೂಟಿಗೈದಿದೆ.
ಇವರು ಜ್ಯುವೆಲ್ಲರಿಗಳಿಗೆ ಚಿನ್ನಾಭರಣ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದು, ಸುಳ್ಯ ಮತ್ತು ಪುತ್ತೂರಿನ ಜ್ಯುವೆಲ್ಲರಿಗಳಿಗೆ ಚಿನ್ನಾಭರಣ ತಲುಪಿಸಿ ಅಲ್ಲಿಂದ ಕಾಸರಗೋಡಿಗೆ ಬಂದು ತ್ರಿಶೂರಿಗೆ ಮರಳಲು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು ಎನ್ನಲಾಗಿದೆ.
ಸ್ವಿಫ್ಟ್ ಕಾರಿನಲ್ಲಿ ದರೋಡೆ ಕೋರರು ಬಂದಿದ್ದರು ಎನ್ನಲಾಗಿದೆ. ಘಟನೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ತಲುಪಿದ ಕಾಸರಗೋಡು ಪೊಲೀಸರು ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
Next Story





