ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಪಡುಬಿದ್ರೆ, ಜ.12: ಬಡ ಜನಪರ ಎಂದೆಲ್ಲಾ ಹೇಳಿ ಅಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರ ಬಡವರ ಸೇವೆ ಮಾಡುವ ಬದಲು ಅವರ ಜೀವನದ ಮೇಲೆ ಚೆಲ್ಲಾಟ ಆಡುತ್ತಿದೆ. ಬಡವರ ಸೇವೆ ಮಾಡಲು ಆಗದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನ ದಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ಪಡುಬಿದ್ರೆ ಬಸ್ ನಿಲ್ದಾಣದ ಬಳಿ ಮಂಗಳವಾರ ಕಾಪು ಬಿಜೆಪಿ ಮತ್ತು ಪಡುಬಿದ್ರೆ ಗ್ರಾಮ ಸಮಿತಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ವೈಲ್ಯದ ವಿರುದ್ಧ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಲಾಲಾಜಿ ಮೆಂಡನ್, ಕಾಪು ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಿಜೆಪಿ ಪ್ರಮುಖರಾದ ಮಿಥುನ್ ಹೆಗ್ಡೆ, ಶಿವಪ್ರಸಾದ್ ಶೆಟ್ಟಿ, ಶಶಿಕಾಂತ್ ಪಡುಬಿದ್ರೆ, ರಮಾಕಾಂತ್ ದೇವಾಡಿಗ, ಶಾರದಾ ಪೂಜಾರಿ, ರಮೇಶ್ ಕಾಂಚನ್, ಬಾಲಕೃಷ್ಣ ದೇವಾಡಿಗ ರಾಜೇಶ್ ಕೋಟ್ಯಾನ್, ಶರಣ್ ಮಟ್ಟು, ಮಯ್ಯದ್ದಿ ಹೆಜಮಾಡಿ, ಪಾಂಡುರಂಗ ಹಜೆಮಾಡಿ, ಪ್ರಾಣೇಶ್, ಅಶೋಕ್ ಪೂಜಾರಿ, ಆಶಾ ಶೆಣೈ, ಜಯ ಸಾಲ್ಯಾನ್, ವಿನಯ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.





