ಜ.16: ಬಾಂಧವ್ಯದಿಂದ ಮಾನವ ಹಕ್ಕುಗಳ ಶಾಂತಿ ಜಾಥಾ
ಮಂಗಳೂರು, ಜ.12: ಬಾಂಧವ್ಯ ಒಕ್ಕೂಟ ಮಂಗಳೂರು ಇದರ ದಶಮಾನೋತ್ಸವ ಅಂಗವಾಗಿ ಮಾನವ ಹಕ್ಕುಗಳ ಶಾಂತಿ ಜಾಥಾ ಮತ್ತು ಸಮಾವೇಶ ಜ.16ರಂದು ನಡೆಯಲಿದೆ ಎಂದು ಫಾ.ವಿನೋದ್ ಮಸ್ಕರೇನ್ಹಸ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಬಡಜನರ ಮತ್ತು ನಿರ್ಗತಿಕರ ಅಭಿವೃದ್ಧಿಗಾಗಿ ಬಾಂಧವ್ಯ ಒಕ್ಕೂಟವು ಕಳೆದ 10 ವರ್ಷಗಳಿಂದ ವಿವಿಧ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಜಾಥಾ ಮತ್ತು ಸಮಾವೇಶ ಹಮ್ಮಿ ಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಬೆಳಗ್ಗೆ 9:30ಕ್ಕೆ ಮಿಲಾಗ್ರಿಸ್ ಚರ್ಚ್ ಮೈದಾನದಿಂದ ರ್ಯಾಲಿ ನಡೆಯಲಿದೆ. ಬಳಿಕ ಬೆಂದೂರು ಸೈಂಟ್ ಆ್ಯಗ್ನೆಸ್ ಸ್ಪೆಷಲ್ ಸ್ಕೂಲ್ ಮೈದಾನದಲ್ಲಿ ಸಮಾವೇಶ ಜರಗಲಿದೆ ಎಂದವರು ತಿಳಿಸಿದರು.
ಒಕ್ಕೂಟದ ಕಾರ್ಯದರ್ಶಿ ವಂ.ಓಸ್ವಾಲ್ಡ್ ಮೊಂತೆರೊ, ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆ ಮುಖ್ಯಸ್ಥೆ ಡ್ಯಾಫ್ನಿ, ಸಿ.ಸೆಲಿನ್, ವಿಕ್ಟರ್‌ವಾಸ್ ಉಪಸ್ಥಿತರಿದ್ದರು.





