ಪಾಕ್‌ನ ಪೋಲಿಯೊ ಲಿಸಿಕೆ ಕೇಂದ್ರದ ಬಳಿ ಬಾಂಬ್ ಸ್ಫೋಟ; 15ಬಲಿ

ಕರಾಚಿ, ಜ.13:ಇಲ್ಲಿನ ಕ್ವಿಟ್ಟಾ ನಗರದ ಪೋಲಿಯೋ ಲಸಿಕೆ ಕೇಂದ್ರದ ಬಳಿ ಸ್ಫೋಟ ಸಂಭವಿಸಿದ ಪರಿಣಾಮ 15 ಮಂದಿ ಮೃತಪಟ್ಟಿದ್ದಾರೆ.
ಸ್ಫೋಟದಿಂದಾಗಿ ಮೃತಪಟ್ಟವರಲ್ಲಿ 12 ಮಂದಿ ಪೊಲೀಸರು ಹಾಗೂ ಇಬ್ಬರು ನಾಗರಿಕರು ಸೇರಿದ್ದಾರೆ. 10ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರಲ್ಲಿ 9ಮಂದಿ ಪೊಲೀಸರು ಸೇರಿದ್ದಾರೆ. ಪೊಲೀಸರನ್ನು ಗುರಿಯಾಗಿರಿಸಿ ಭಯೋತ್ಪಾದಕರು ಈ ದಾಳಿ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
Next Story





