ಅಫ್ಘಾನಿಸ್ತಾನದಲ್ಲಿ ಪಾಕ್ ರಾಯಭಾರಿ ಕಚೇರಿ ಬಳಿ ಆತ್ಮಾಹುತಿ ದಾಳಿ; 4 ಸಾವು

ಕಾಬೂಲ್, ಜ.13: ಪಾಕಿಸ್ತಾನದ ಜಲಾಲಾಬಾದ್ ನಗರದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿ ಸಮೀಪ ಆತ್ಮಾಹುತಿ ದಾಳಿಯಿಂದಾಗಿ ಇಬ್ಬರು ಅಫ್ಘನ್ ಪೊಲೀಸರು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ಧಾರೆ.
ಭಾರತ ಮತ್ತು ಇರಾನ್ ರಾಯಭಾರಿ ಕಚೇರಿ ಹತ್ತಿರದಲ್ಲಿರುವ ಪಾಕ್‌ನ ರಾಯಭಾರಿ ಕಚೇರಿ ಬಳಿ ಆತ್ಮಾಹುತಿ ಬಾಂಬರ‍್ ದಾಳಿ ನಡೆದಿದೆ. ಸ್ಫೋಟ ಸಂಭವಿಸಿದ ಬಳಿಕ ಗುಂಡಿನ ಚಕಮಕಿ ನಡೆದಿದೆ. ಒಟ್ಟು 4 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ಧಾರೆ.
ಅಫ್ಘಾನಿಸ್ತಾನದ ರಾಯಭಾರಿ ಕಚೇರಿಯನ್ನು ಗುರಿಯಾಗಿರಿಸಿಕೊಂಡು ಆಗಾಗ ದಾಳಿ ನಡೆಯುತ್ತಿದೆ. ಜನವರಿ 3ರಂದು ಉಗ್ರರು ದಾಳಿ ನಡೆಸಿದ್ದರು.
Next Story





