ಸಹಬಾಳ್ವೆಯ ಸಾಗರ - ಜನವರಿ,15 ರಂದು ಬೆಳ್ತಂಗಡಿಯಲ್ಲಿ ತಾಲೂಕು ಸಮಿತಿ ಸಭೆ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯು ಮಂಗಳೂರಿನ ಪುರಭವನದಲ್ಲಿ ಗಾಂಧಿ ಹತ್ಯೆಯ ದಿನವಾದ ಜನವರಿ,30-2016 ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಸಮ್ಮೇಳನ ಸಹಬಾಳ್ವೆಯ ಸಾಗರ ಕಾರ್ಯಕ್ರಮದ ಬಗೆಗಿನ ಪ್ರಚಾರ ಮತ್ತು ಜನರನ್ನು ತಲುಪುವ ಭಾಗವಾಗಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ತಾಲೂಕು ಸಮಿತಿಯನ್ನು ರಚಿಸಿಕೊಂಡು ಮುನ್ನಡೆಯಲು ನಿರ್ಧರಿಸಿದೆ.
ಅದರಂತೆ ಬೆಳ್ತಂಗಡಿ ತಾಲೂಕಿನ ಸಭೆಯು ಜನವರಿ,15 ರ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಶಿಬಿ ಧರ್ಮಸ್ಥಳರವರ ನೇತೃತ್ವದಲ್ಲಿ ಬೆಳ್ತಂಗಡಿ ಭಾಗದ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತ್ತು ಜನಪರ - ಪ್ರಗತಿಪರ ಸಂಘಟನೆಗಳು ಮತ್ತು ಮುಖಂಡರ ಸೇರುವಿಕೆಯೊಂದಿಗೆ ನಡೆಯಲಿದೆ. ನಾಡಿನ ಸೌಹಾರ್ದ ಪರಂಪರೆಯನ್ನು ಉಳಿಸಿ- ಬೆಳೆಸುವ ನಿಟ್ಟಿನಲ್ಲಿ ನಡೆಯುವ ಈ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಸಹಬಾಳ್ವೆಯನ್ನು ಆಶಿಸುವ ಎಲ್ಲರೂ ಜೊತೆಗೂಡಬೇಕಾಗಿ ಸಹಬಾಳ್ವೆ ಸಾಗರದ ಸಮ್ಮೇಳನದ ಸ್ವಾಗತ ಸಮಿತಿ ವಿನಂತಿಸಿದೆ





