ಅಲ್ ಮದೀನಾ ದಮ್ಮಾಮ್ ಕಮಿಟಿಗೆ ಆಯ್ಕೆ

ದಮಾಮ್, ಜ.13: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ದಮ್ಮಾಮ್ ಕಮಿಟಿಯ 2016-17ನೆ ಸಾಲಿನ ಸಭೆಯು ಇತ್ತೀಚೆಗೆ ದಮ್ಮಾಮ್ ಅಲ್ ಮದೀನಹಾಲ್ನಲ್ಲಿ ಜರಗಿತು.
ಅಧ್ಯಕ್ಷ ಕಾಸಿಂ ಹಾಜಿ ಅಡ್ದೂರ್ ಅಧ್ಯಕ್ಷತೆ ವಹಿಸಿದ್ದರು. ದಮ್ಮಾಮ್ಜಂಇಯ್ಯತು ರಿಫ್‌ಅತುದ್ದೀನ್ ಕಾರ್ಯದರ್ಶಿ ಹಬೀಬ್ ಸಖಾಫಿ ದುಆ ನೆರವೇರಿಸಿದರು. ಪಿ.ಸಿ.ಅಬೂಬಕರ್ ಸಅದಿ ಉದ್ಘಾಟಿಸಿದರು. ಡಿಕೆಎಸ್‌ಸಿ ಮುಖಂಡ ಅನ್ಸಾರ್ ಕಾನ ಚುನಾವಣಾಧಿಕಾರಿ ಯಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಅಧ್ಯಕ್ಷರಾಗಿ ಹಾಜಿ ಕಾಸಿಮ್ ಅಡ್ಡೂರ್, ಉಪಾಧ್ಯಕ್ಷರಾಗಿ ಇಬ್ರಾಹೀಂ ಬಂಟ್ವಾಳ, ಅಝೀಝ್ ಕಂದಾವರ, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಮಂಜನಾಡಿ, ಕಾರ್ಯ ದರ್ಶಿಯಾಗಿ ಇಸ್ಮಾಯೀಲ್ ಪೋಯ್ಯಲ್, ಅಶ್ರಫ್ ಕುತ್ತಾರ್, ಕೋಶಾಧಿಕಾರಿಯಾಗಿ ಇಝ್ಝುದ್ದೀನ್ ಮುಸ್ಲಿಯಾರ್, ಲೆಕ್ಕ ಪರಿಶೋಧಕರಾಗಿ ಅನ್ಸಾರ್ ಕಾನ ಹಾಗೂ 11 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆರಿಸಲಾಯುತು.
ವಲಯ ಸಮಿತಿ ಅದ್ಯಕ್ಷ ಟಿ.ಎಚ್. ಬಶೀರ್ ತೋಟಾಲ್, ಇಬ್ರಾಹೀಂ ಬಂಟ್ವಾಳ್ ಉಪಸ್ಥಿತರಿದ್ದರು. ಹಾಲಿ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಸ್ವಾಗತಿಸಿ, ವಂದಿಸಿದರು.





