ಸಮಾಜದ ಅಭಿವೃದ್ಧಿಗೆ ಸಂಶೋಧನೆಗಳು ಸಹಕಾರಿ: ಪ್ರೊ.ಶಂಕರ್: ಸಂಶೋಧನಾ ವಿಧಾನಶಾಸ್ತ್ರ ಕಾರ್ಯಾಗಾರಕ್ಕೆ ಚಾಲನೆ

ಕೊಣಾಜೆ, ಜ.13: ಸಂಶೋಧನೆಗಳಿಗೆ ವಿಪುಲ ಅವಕಾಶಗಳು ದೊರೆಯುತ್ತಿವೆ. ಆದರೆ ಪಿಎಚ್‌ಡಿ ಸಂಶೋಧನೆಗಳು ಯಾವುದೇ ಪ್ರಬಂಧಗಳ ಅಚ್ಚು ರೂಪವಾಗಿರದೆ ವಿಭಿನ್ನ ವಿಷಯಗಳ ಅಧ್ಯಯನ ನಡೆದು ಹೊಸ ಆವಿಷ್ಕಾರಗಳು ನಡೆಯಬೇಕು. ಮಾತ್ರವಲ್ಲದೆ ಸಂಶೋಧನೆಗಳು ಸಮಾಜದ ಅಭಿವೃದ್ಧಿಯಲ್ಲಿ ಪರಿಣಾಮಕಾರಿ ಯಾಗಿರಬೇಕು ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಐಸಿಎಸ್‌ಎಸ್‌ಆರ್ ಪ್ರಾಯೋಜಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಹತ್ತು ದಿನಗಳ ಸಂಶೋಧನಾ ವಿಧಾನಶಾಸ್ತ್ರ ಕಾರ್ಯಾ ಗಾರವನ್ನು ಮಂಗಳೂರು ವಿವಿಯ ಹಳೆ ಸೆನೆಟ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಕೆ. ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿನಯರಜತ್, ಪ್ರಾಧ್ಯಾಪಕರಾದ ಪ್ರೊ.ಅರಬಿ, ಡಾ.ಪೌಲ್, ಡಾ.ಯಶಸ್ವಿನಿ ಮತ್ತಿತರರು ಉಪಸ್ಥಿತರಿದ್ದರು.
Next Story





