ಪಡುಬಿದ್ರೆ ವಲಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್; ಬ್ರಹ್ಮಾವರದ ಪವನ್-ದೀಪಕ್ ಜೋಡಿಗೆ ಪ್ರಶಸ್ತಿ

ಪಡುಬಿದ್ರೆ, ಜ.13: ಪಡುಬಿದ್ರೆ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆದ ವಲಯ ಮಟ್ಟದ ಹೊನ ಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟದಲ್ಲಿ ಬ್ರಹ್ಮಾವರದ ಪವನ್-ದೀಪಕ್ ಜೋಡಿ ಪ್ರಶಸ್ತಿ ಗಳಿಸಿದೆ.
ಫೈನಲ್‌ನಲ್ಲಿ ಪಡುಬಿದ್ರೆ ತಂಡದ ವೈ.ಸುಕುಮಾರ್-ಅಶ್ರಫ್ ಜೋಡಿಯನ್ನು 15-11,15-12 ನೇರ ಸೆಟ್‌ಗಳಿಂದ ಸೋಲಿಸಿದ ಪವನ್-ದೀಪಕ್ ಜೋಡಿ ಪಿಬಿಸಿ ಟ್ರೋಫಿ-2016ರ ಜೊತೆಗೆ ನಗದು 5,555 ರೂ. ಪಡೆಯಿತು.
ವೈ.ಸುಕುಮಾರ್-ಅಶ್ರಫ್ ಜೋಡಿ ದ್ವಿತೀಯ ಪ್ರಶಸ್ತಿ ಯೊಂದಿಗೆ ನಗದು 3,333 ರೂ.ನ್ನು ಪಡೆಯಿತು. ರಂಜಿತ್-ಮನೀಷ್ ಜೋಡಿ ತೃತೀಯ ಪ್ರಶಸ್ತಿಯೊಂದಿಗೆ ನಗದು 1,111 ರೂ., ಚತುರ್ಥ ಸ್ಥಾನಿ ಪಡುಬಿದ್ರೆಯ ವೈ.ಸುಧೀರ್ ಕುಮಾರ್-ಪ್ರಕಾಶ್ ರಾವ್ ನಗದು 777 ರೂ. ಪಡೆದರು.
Next Story





