ತೈಲ ಬೆಲೆ ಬ್ಯಾರಲ್‌ಗೆ 30 ಡಾ. ಮಟ್ಟಕ್ಕಿಂತಲೂ ಕೆಳಗೆ
ನ್ಯೂಯಾರ್ಕ್, ಜ. 13: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮಂಗಳವಾರ ಕೊಂಚ ಹೊತ್ತು ಬಹು ನಿರೀಕ್ಷಿತ ಬ್ಯಾರಲ್‌ಗೆ 30 ಡಾಲರ್ ಮಟ್ಟಕ್ಕಿಂತಲೂ ಕೆಳಗಿಳಿಯಿತು. ಇದರೊಂದಿಗೆ ಈ ವರ್ಷ ಕಚ್ಚಾ ತೈಲ ಬೆಲೆಯಲ್ಲಿ 20 ಶೇಕಡ ಕುಸಿತ ಉಂಟಾದಂತಾಗಿದೆ.
ಕಚ್ಚಾ ತೈಲ ಬೆಲೆಯು ದಿನದ ಮಟ್ಟಿಗೆ ಶೇ. 3ರಷ್ಟು ಕಡಿಮೆಯಾಯಿತು. ಬೆಲೆ ಕುಸಿತ ಬ್ಯಾರಲ್‌ಗೆ 20 ಡಾಲರ್‌ವರೆಗೂ ಮುಂದುವರಿಯಬಹುದು ಎಂದು ಕೆಲವು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಚೀನಾದ ಅನಿಶ್ಚಿತ ಬೇಡಿಕೆ ಮತ್ತು ಉತ್ಪಾದನೆಯ ಮೇಲೆ ನಿಯಂತ್ರಣವಿಲ್ಲದಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳುತ್ತಾರೆ.
Next Story





