ವಿಶ್ವ ದಾಖಲೆ ವೀರ ಧನವಾಡೆಗೆ ಎಂಸಿಎ ಸನ್ಮಾನ

ಮುಂಬೈ, ಜ.13: ಇತ್ತೀಚೆಗೆ ಅಂತರ್-ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಔಟಾಗದೆ 1009 ನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿರುವ ಶಾಲಾ ಬಾಲಕ ಪ್ರಣವ್ ಧನವಾಡೆಗೆ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಬುಧವಾರ ಸನ್ಮಾನಿಸಿತು.
ಕಲ್ಯಾಣ್‌ನ ಧನವಾಡೆ, ಆತನ ಕೋಚ್ ಮುಬೀನ್ ಶೇಖ್‌ಗೆ ಎಂಸಿಎ ಅಧ್ಯಕ್ಷ ಶರದ್ ಪವಾರ್ ಸನ್ಮಾನಿಸಿದರು.
ಮುಖ್ಯ ಅತಿಥಿ ಹಾಗೂ ಮಾಜಿ ಟೆಸ್ಟ್ ಆಟಗಾರ ಮಾಧವ್ ಅಪ್ಟೆ ರಿಕ್ಷಾ ಚಾಲಕನ ಮಗ ಪ್ರಣವ್‌ಗೆ 1.2 ಲಕ್ಷ ರೂ. ಚೆಕ್‌ನ್ನು ಹಸ್ತಾಂತರಿಸಿದರು. ಎಂಸಿಎ ಪ್ರಣವ್‌ಗೆ ಮುಂದಿನ ಐದು ವರ್ಷದ ಅವಧಿಗೆ ಪ್ರತಿ ವರ್ಷ 10,000 ರೂ. ನೀಡಲು ನಿರ್ಧರಿಸಿದೆ.
Next Story





