ಪಾಕ್: ಬಾಂಬ್ ಸ್ಫೋಟ; 15 ಸಾವು
ಕ್ವೆಟ್ಟ, ಜ. 13: ನೈರುತ್ಯ ಪಾಕಿಸ್ತಾನದ ನಗರ ಕ್ವೆಟ್ಟದಲ್ಲಿರುವ ಪೋಲಿಯೊ ಲಸಿಕೆ ಕೇಂದ್ರದ ಹೊರಗೆ ಪೊಲೀಸರನ್ನು ಗುರಿಯಾಗಿಸಿ ಬುಧವಾರ ನಡೆಸಲಾದ ಸ್ಫೋಟದಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
ಬಲೂಚಿಸ್ತಾನ ರಾಜ್ಯದಲ್ಲಿ ನಡೆಯುತ್ತಿರುವ ಪೋಲಿಯೊ ಲಸಿಕೆ ಅಭಿಯಾನದ ಮೂರನೆ ದಿನದಂದು ಪೋಲಿಯೊ ಕಾರ್ಯಕರ್ತರಿಗೆ ಭದ್ರತೆ ಒದಗಿಸಲು ಕೇಂದ್ರದ ಹೊರಗೆ ಪೊಲೀಸರು ನೆರೆದಿದ್ದರು. ಮೃತಪಟ್ಟವರಲ್ಲಿ 12 ಪೊಲೀಸ್, ಓರ್ವ ಅರೆಸೈನಿಕ ಯೋಧ ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ.
Next Story





