ಹೊಸ ಬೆಳೆ ವಿಮೆ ಯೋಜನೆಗೆ ಕೇಂದ್ರ ಸಂಪುಟದ ಅನುಮೋದನೆ
ಹೊಸದಿಲ್ಲಿ, ಜ.13: ರೈತರು ಕಡಿಮೆ ಪ್ರೀಮಿಯಂ ಪಾವತಿಸಿ, ವಿಮೆ ಮಾಡಿರುವ ಸಂಪೂರ್ಣ ಮೊತ್ತವನ್ನು ತ್ವರಿತವಾಗಿ ಪಡೆಯುವುದನ್ನು ಖಚಿತಪಡಿಸಲು, ಹಾಲಿ ಬೆಳೆ ವಿಮಾ ಯೋಜನೆಗೆ ಬದಲಾಗಿ ಹೊಸ ಯೋಜನೆಯೊಂದರ ಜಾರಿಗೆ ಸರಕಾರವಿಂದು ಅಂಗೀಕಾರ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಬಹು ನಿರೀಕ್ಷಿತ ಯೋಜನೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ಬೆಳೆ ವಿಮೆ ಯೋಜನೆಯ ಕುರಿತಾದ ಕೃಷಿ ಸಚಿವಾಲಯದ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಿತೆಂದು ಮೂಲಗಳು ತಿಳಿಸಿವೆ.
ಈ ವರ್ಷದ ಖರೀಫ್ ಹಂಗಾಮಿನಿಂದ ಅನುಷಾನಿಸಲಾಗುವ ಈ ಹೊಸ ಬೆಳೆ ವಿಮೆ ಯೋಜನೆಯು, ಕೆಲವು ಲೋಪಗಳಿರುವ ಈಗಿನ ಎರಡು ಯೋಜನೆಗಳಾದ ರಾಷ್ಟ್ರೀಯ ಕೃಷಿ ವಿಮೆ ಯೋಜನೆ(ಎನ್‌ಎಐಎಸ್) ಹಾಗೂ ತಿದ್ದುಪಡಿಯಾದ ಎಸ್‌ಎಇಎಸ್‌ಗಳನ್ನು ಪಲ್ಲಟಿಸಲಿದೆ.
Next Story





