'ಸಹಬಾಳ್ವೆಯ ಸಾಗರ ಕ್ಕೆ ಸಿಪಿಐ(ಎಂ) ಬೆಂಬಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಗಾಂಧಿ ಹತ್ಯೆಯ ದಿನವಾದ ಜನವರಿ,30 ರಂದು ಮಂಗಳೂರಲ್ಲಿ ಹಮ್ಮಿಕೊಂಡಿರುವ 'ಸಹಬಾಳ್ವೆಯ ಸಾಗರ '- ರಾಷ್ಟ್ರೀಯ ಸಮ್ಮೇಳನದಲ್ಲಿ ಜೊತೆಗೂಡಲು ಸಿಪಿಐ(ಎಂ) ರಾಜ್ಯ ಸಮಿತಿ ಇಂದು ಸಭೆ ನಡೆಸಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಸಿಫಿಐ(ಎಂ) ನ ರಾಜ್ಯ ಕಾರ್ಯದರ್ಶಿ ಮಂಡಳಿಯ ಜಿ.ಎನ್.ನಾಗರಾಜ್ ಅವರನ್ನು ಪಕ್ಷದ ಪರವಾಗಿ ಸಮ್ಮೇಳನಕ್ಕೆ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾಮ್ರೇಡ್ ಜಿ.ಎನ್.ನಾಗರಾಜ್ ಅವರು ಈ ಹಿಂದೆ ಸಿಪಿಐ(ಎಂ)ನ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದು, ಇದೀಗ ವಿಕಲ ಚೇತನರ ಪರವಾದ ಸಂಘಟನೆ ಮತ್ತು ಹೋರಾಟಗಳ ಮುಂಚೂಣಿಯನ್ನು ವಹಿಸಿಕೊಂಡವರಾಗಿದ್ದು, ಈ ಹಿಂದೆ ಕೋಮು ಸೌಹಾರ್ದ ವೇದಿಕೆಯ ಹಲವಾರು ಸಮ್ಮೇಳನಗಳಲ್ಲಿ ಜೊತೆಗೂಡಿದವರಾಗಿದ್ದಾರೆ.
Next Story





