ಪರ್ಯಾಯ: ಮಾಧ್ಯಮ ಕೇಂದ್ರ, ವೈಫೈ ಸೌಲಭ್ಯ ಉದ್ಘಾಟನೆ

ಉಡುಪಿ, ಜ.13: ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ಐದನೆ ಪರ್ಯಾಯ ಪೀಠಾರೋಹಣಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಇಂದು ರಾಜಾಂಗಣ ವಾಹನ ತಂಗುದಾಣದ ಬಳಿ ಇರುವ ಯಾತ್ರಿ ನಿವಾಸದಲ್ಲಿ ಮಾಧ್ಯಮ ಕೇಂದ್ರ ಹಾಗೂ ವೈಫೈ ಸೌಲಭ್ಯಗಳ ಉದ್ಘಾಟನೆ ನಡೆಯಿತು.
ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಪೇಜಾವರಶ್ರೀ ಎಲ್ಲರೂ ಸೇರಿ ಉತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪರ್ಯಾಯ ಸ್ವಾಗತ ಸಮಿತಿಯ ಮಹಾಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವೈಫೈ ಸೌಲಭ್ಯವನ್ನು ಉದ್ಘಾಟಿಸಿದರು.
ಪೇಜಾವರ ಮಠದ ದಿವಾನರಾದ ಎಂ.ರಘುರಾಮಾಚಾರ್ಯ, ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಬಾಲಾಜಿ ರಾಘವೇಂದ್ರಾಚಾರ್ಯ, ಭುವನೇಂದ್ರ ಕಿದಿಯೂರು, ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಇತರರು ಉಪಸ್ಥಿತರಿದ್ದರು.
Next Story





