ವಿವಿಧೆಡೆ ದಫ್ ಸ್ಪರ್ಧೆ
ವಿಟ್ಲ, ಜ.13: ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆಗಳಲ್ಲಿ ಜನವರಿ ತಿಂಗಳಲ್ಲಿ ದಫ್ ಸ್ಪರ್ಧೆ ನಡೆಯಲಿದೆ. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ದಶಮಾನೋತ್ಸವದ ಪ್ರಯುಕ್ತ ಜ.15ರಂದು ಅಪರಾಹ್ನ 2:30ಕ್ಕೆ ದಪ್ ಜಾಥಾ ಹಾಗೂ ಸ್ಪರ್ಧಾ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಸುಳ್ಯ ತಾಲೂಕಿನ ಬೆಳ್ಳಾರೆ ದರ್ಗಾ ಶರ್ೀ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಇಲ್ಲಿನ ಝಕರಿಯಾ ಜುಮಾ ಮಸೀದಿ ವಠಾರದಲ್ಲಿ ಜ.17ರಂದು ಬೆಳಗ್ಗೆ 10 ಗಂಟೆಗೆ ದ್ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ 8:30ಕ್ಕೆ ಉಡುಪಿ ಜಿಲ್ಲೆಯ ಮಣಿಪುರ-ಕಟಪಾಡಿಯ ಖಲಂದರ್ ಷಾ ದ್ ಸಮಿತಿಯ ಆಶ್ರಯದಲ್ಲಿ ಹೊನಲು ಬೆಳಕಿನ ದ್ ಸ್ಪರ್ಧಾ ಕಾರ್ಯಕ್ರಮವು ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ದ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಹಾಗೂ ಕರಾವಳಿ ಟೈಮ್ಸ್ ಪತ್ರಿಕಾ ಬಳಗದ ಸಂಯುಕ್ತ ಆಶ್ರಯದಲ್ಲಿ ಜ.30ರಂದು ರಾತ್ರಿ 8:30ಕ್ಕೆ ಪಾಣೆಮಂಗಳೂರು-ಆಲಡ್ಕ ಮೈದಾನದ ಮರ್‌ಹೂಂ ಶೈಖುನಾ ಸಜಿಪ ಉಸ್ತಾದ್ ನಗರದ ಮರ್‌ಹೂಂ ಕೆ.ಎಂ. ಇಕ್ಬಾಲ್ ಮಾಸ್ಟರ್ ವೇದಿಕೆಯಲ್ಲಿ ಹೊನಲು ಬೆಳಕಿನ ದ್ ಸ್ಪರ್ಧೆ ನಡೆಯಲಿದೆ.ಮಾಹಿತಿಗಾಗಿ ಮೊ.ಸಂ. 9611545686 ಅಥವಾ 9844976826 ಎಂದು ದ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರ್ ಪಾಣೆಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





