ಇಪಿಎಫ್ ಬಡ್ಡಿದರ ಕಡಿತಕ್ಕೆ ಕೇಂದ್ರ ನಿರ್ಧಾರ

ನವದೆಹಲಿ: ಎಲ್ಲ ಸಣ್ಣ ಉಳಿತಾಯ ಮೇಲಿನ ಬಡ್ಡಿದರ ಕಡಿತಗೊಳಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಇಪಿಎಫ್ ಹಾಗೂ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಮತ್ತಿತರ ಬಡ್ಡಿದರಗಳು ಕಡಿತವಾಗಲಿವೆ. ಇದು ಉಳಿತಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ವೇಳೆ ಬ್ಯಾಂಕುಗಳು ಕಡಿಮೆ ದರದಲ್ಲಿ ಸಾಲ ನೀಡಲು ಇದು ಅನುಕೂಲವಾಗಲಿದೆ.
ಆದರೂ ಈ ಕುರಿತ ಕೇಂದ್ರ ಸರ್ಕಾರದ ಅಂತಿಮ ನಿರ್ಧಾರ ಭದ್ರತಾ ಪತ್ರಗಳ ಮೇಲಿನ ಪ್ರತಿಫಲವನ್ನು ಅವಲಂಬಿಸಿದೆ. ಸುಮಾರು 50 ಮೂಲ ಅಂಶಗಳಷ್ಟು ಬಡ್ಡಿದರವನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ಹಣಕಾಸು ಸಚಿವಾಲಯ ವಿವಿಧ ಉತ್ಪನ್ನಗಳ ಬಡ್ಡಿದರವನ್ನು ಅಂತಿಮಪಡಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಐದು ವರ್ಷಕ್ಕಿಂತ ಕಡಿಮೆ ಅವಧಿಯ ಪರಿಪಕ್ವತಾ ಅವಧಿ ಹೊಂದಿರುವ ಉತ್ಪನ್ನಗಳಿಗೆ ಮತ್ತಷ್ಟು ದರ ಕಡಿಮೆ ಮಾಡುವ ನಿರೀಕ್ಷೆ ಇದೆ.
Next Story





