ದಟ್ಟ ಹೊಗೆ ಮಂಜು: ಚೆನ್ನೈನಲ್ಲಿ ವಿಮಾನ ವಿಳಂಬ

ಚೆನ್ನೈ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಹೊಗೆ ಮಂಜು ಮುಸುಕಿದ್ದ ಹಿನ್ನೆಲೆಯಲ್ಲಿ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.
ಕೇವಲ 250 ಮೀಟರ್ ಅಂತರವನ್ನು ಮಾತ್ರ ನೋಡಬಹುದಾಗಿದ್ದರಿಂದ ಹಲವು ವಿಮಾನಗಳ ಹಾರಾಟ ವಿಳಂಬವಾಗಿದೆ. ಇದರಿಂದಾಗಿ ಬೆಂಗಳೂರು, ತಿರುವನಂತಪುರ, ಹೈದ್ರಾಬಾದ್, ಮುಂಬೈ ಹಾಗೂ ರಿಯಾದ್‌ಗಳಿಂದ ಆಗಮಿಸುತ್ತಿದ್ದ ವಿಮಾನಗಳು ಕೆಳಕ್ಕೆ ಇಳಿಯಲಾಗದೇ 10 ನಿಮಿಷಕ್ಕೂ ಹೆಚ್ಚು ಕಾಲ ತಡೆ ಹಿಡಿಯಲ್ಪಟ್ಟಿತ್ತು.
ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಹಲವೆಡೆ ಭೋಗಿಬಾನ್ ಬೆಂಕಿ ಹಚ್ಚಿದ್ದರಿಂದ ದಟ್ಟ ಹೊಗೆ ಕಾಣಿಸಿಕೊಂಡಿತು. ರನ್‌ವೇಯಲ್ಲಿ 200 ಮೀಟರ್ ಅಂತರವನ್ನು ಮಾತ್ರ ಕಾಣಬಹುದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ 7.30ರ ಬಳಿಕ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
Next Story





