ವಂಚನೆ ಪ್ರಕರಣ: ಆರೋಪಿಯ ಬಂಧನ
ಕಾಸರಗೋಡು : ಪತ್ರಿಕೆಯಲ್ಲಿ ವಿವಾಹ ವಾರ್ಷಿಕ ಜಾಹಿರಾತು ನೀಡಿ ವಂಚಿಸಿದ ಬಗ್ಗೆ ಲಭಿಸಿದ ದೂರಿನಂತೆ ಸುಬ್ರಹ್ಮಣ್ಯ ಗು೦ಡ್ಯದ ವ್ಯಕ್ತಿಯೋರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ .
ಬಂಧಿತನನ್ನು ಗುಂಡ್ಯದ ದಯಾನಂದ (35) ಎಂದು ಗುರುತಿಸಲಾಗಿದೆ. ಪೆರ್ಮುದೆ ನಿವಾಸಿಯಾದ ಉಪ್ಪಳದಲ್ಲಿ ಲ್ಯಾಬ್ ಟೆಕ್ನಿಶಿಯನ್ ನೀಡಿದ ದೂರಿನಂತೆ ಈತನನ್ನು ಬಂಧಿಸಲಾಗಿದೆ.
ಬಸ್ಸು ಮಾಲಕನಾಗಿರುವ ದಯಾನಂದ ಮತ್ತು ಯುವತಿ ನಡುವೆ ಪ್ರೇಮವಿತ್ತೆನ್ನಲಾಗಿದೆ. ಉಪ್ಪಳ ಸಮೀಪದ ದೇವಸ್ಥಾನದಲ್ಲಿ ಕರಿಮಣಿ ಸರ ಹಾಕಿಸಿದ್ದು , ಬಳಿಕ ವಿಟ್ಲಕ್ಕೆ ಕರೆದೊಯ್ದು ಸ್ಟುಡಿಯೋ ವೊಂದರಲ್ಲಿ ಫೋಟೋ ತೆಗೆಸಲಾಗಿದೆ.
ಜನವರಿ ಒಂದರಂದು ಪತ್ರಿಕೆಯೊಂದರಲ್ಲಿ ವಿವಾಹ ವಾರ್ಷಿಕದ ಭಾವಚಿತ್ರ ಪ್ರಕಟಿಸಿದ್ದು , ಇದರಿಂದ ವಂಚನೆ ಬೆಳಕಿಗೆ ಬಂದಿದೆ. ವಿವಾಹ ಮೊಟಕು ಗೊಳಿಸಲು ಈ ತಂತ್ರ ನಡೆಸಿರುವುದಾಗಿ ಸಂಶಯ ಉಂಟಾಗಿದ್ದು , ಯುವತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಳು . ಇದರಂತೆ ಆರೋಪಿಯನ್ನು ಬಂಧಿಸಲಾಗಿದೆ .
Next Story





