ಕಾಸರಗೋಡು: ವಿಷ ಸೇವಿಸಿದ್ದ ಯುವತಿ ಮೃತ್ಯು

ಕಾಸರಗೋಡು : ವಿಷಸೇವಿಸಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವಳನ್ನು ಕರಂದಕ್ಕಾಡ್ ಶಾಂತಿನಗರದ ನೀತು (23) ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ರಿಸೆಪ್ಶನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಜನವರಿ ನಾಲ್ಕರಂದು ವಿಷ ಸೇವಿಸಿದ್ದಳು. ಗಂಭೀರ ಸ್ಥಿಯಲ್ಲಿದ್ದ ಈಕೆಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ರಾತ್ರಿ ಮೃತಪಟ್ಟರು. ಕಾಸರಗೋಡು ಪೊಲೀಸ್ ಠಾಣೆ ಯಲ್ಲಿ ಕೇಸು ದಾಖಲಿಸಲಾಗಿದೆ.
Next Story





