ಹುಡುಗಿ ಚುಡಾವಣೆ: ಪೊಲೀಸ್ ಪೇದೆಗೆ ಸಾರ್ವಜನಿಕರಿಂದ ಥಳಿತ ಬಂಧನ
ಮಂಗಳೂರು, ಜ. 14: ಶಾಲಾ ಬಾಲಕಿಯೋರ್ವಳಿಗೆ ಚುಡಾಯಿಸಿದ ಆರೋಪದ ಮೇರೆಗೆ ಸ್ಥಳೀಯರಿಂದ ಪೆಟ್ಟುತಿಂದ ಪೊಲೀಸ್ ಪೇದೆಯೋರ್ವನನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಸದಾಶಿವ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ವಿವಾಹತನಾಗಿರುವ ಈತ ಉರ್ವ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸಿದ್ದು, ಎರಡು ತಿಂಗಳ ಹಿಂದಷ್ಟೇ ಫಿಂಗರ್ ಪ್ರಿಂಟ್ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾನೆ.
ಗುರುವಾರ ಸಂಜೆ ನಗರದ ಪಾಂಡೇಶ್ವರದಲ್ಲಿರುವ ೆರಂ ಫಿಝಾ ಮಾಲ್ ಸಮೀಪ ರಸ್ತೆಯಲ್ಲಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಬಾಲಕಿಯೋರ್ವಳನ್ನು ಹಿಂಬಾಲಿಸಿಕೊಂಡು ಬಂದು ಅನುಚಿತವಾಗಿ ವರ್ತಿಸಿದ್ದಲ್ಲದೆ, ತನ್ನೊಂದಿಗೆ ಬರುವಂತೆ ಪೀಡಿಸಿದ್ದಾನೆನ್ನಲಾಗಿದೆ. ಇದನ್ನು ಗಮಿನಿಸಿದ ಸಾರ್ವಜನಿಕರು ಆತನನ್ನು ಹಿಗ್ಗಾಮುಗ್ಗಾ ಥಳಿಸಿ ಠಾಣೆಗೊಪ್ಪಿಸಿದ್ದಾರೆ. ಬಾಲಕಿ ನೀಡಿದ ಹೇಳಿಕೆಯಂತೆ ಪಾಂಡೇಶ್ವರ ಮಹಿಳಾ ಪೊಲೀಸರು ಆರೋಪಿಯನ್ನು ಪೋಸ್ಕೊ ಕಾಯ್ದೆಯಡಿ ಬಂಸಿದ್ದಾರೆ.
Next Story





