ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟ
ಬೆಂಗಳೂರು, ಜ.14: ರಾಜ್ಯ ಪತ್ರಿಕೋದ್ಯಮದ ಅತ್ಯುನ್ನುತ ಪ್ರಶಸ್ತಿಗಳಾದ ಟೀಯೆಸ್ಸಾರ್ ಸ್ಮಾರಕ ಹಾಗೂ ಮೊಹರೆ ಹನುಮಂತರಾಯ ಪ್ರಶಸ್ತಿಗೆ 2014 ಮತ್ತು 2015ನೆ ಸಾಲಿನ ಕ್ಯಾಲೆಂಡರ್ ವರ್ಷದಲ್ಲಿ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲು ಸರಕಾರ ಆಯ್ಕೆ ಸಮಿತಿ ರಚಿಸಿ ಆದೇಶಿದೆ.
ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್‌ದಾಸ್ ಅಧ್ಯಕ್ಷರಾಗಿ, ಹಿರಿಯ ವರದಿಗಾರರಾದ ರುದ್ರಣ್ಣ ಹರ್ತಿಕೋಟೆ, ಸರಜೂ ಕಾಟ್ಕರ್, ಸಿ.ಜಿ.ಮಂಜುಳಾರನ್ನು ಸದಸ್ಯರನ್ನಾಗಿ ಹಾಗೂ ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್‌ರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





