ಮರ್ಕಝುಲ್ ಹುದಾ ಶರೀಅತ್ ಕಟ್ಟಡಕ್ಕೆ ಶಿಲಾನ್ಯಾಸ
ಪುತ್ತೂರು, ಜ.14: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಶರೀಅಃತ್ ವಿಭಾಗದ ಒಂದನೆ ಮಹಡಿಯ ಶಿಲಾನ್ಯಾಸವನ್ನು ಸಂಸ್ಥೆಯ ಅಧ್ಯಕ್ಷ ಸೈಯದ್ ಇಸ್ಮಾಯೀಲ್ ಮದನಿ ಅಲ್ ಹಾದಿ ತಂಙಳ್ ಉಜಿರೆ ನೆರವೇರಿಸಿದರು.
ಮರ್ಕಝುಲ್ ಹುದಾ ಸೌದಿ ಅರೇಬಿಯಾ ಸಮಿತಿಯ ಸಂಚಾಲಕ ಹಾಜಿ ಮುಹಮ್ಮದ್ ಕುಕ್ಕುವಳ್ಳಿ, ಉದ್ಯಮಿಗಳಾದ ಹಾಜಿ ಅಬ್ದುಲ್ಲತೀಫ್ ಗೆಲ್ಡನ್, ಮುಹಮ್ಮದ್ ಶರೀ್ ಪಾಂಡೇಶ್ವರ ಅತಿಥಿಗಳಾಗಿ ಭಾಗವ ಹಿಸಿದ್ದರು.
ಕರ್ನಾಟಕ ಮುಸ್ಲಿಂ ಕೌನ್ಸಿಲ್ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂ ಸುಫಿಯಾನ್ ಮದನಿ, ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಯು.ಕೆ. ಮುಹಮ್ಮದ್ ಸಅದಿ ವಳವೂರು ಶುಭ ಹಾರೈಸಿದರು. ಮರ್ಕಝುಲ್ ಹುದಾ ಸಾರಥಿಗಳಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ಎಸ್.ಎಂ. ಅಹ್ಮದ್ ಬಶೀರ್ ಹಾಜಿ, ಕಟ್ಟೆಕ್ಕಾರ್ ಅಬ್ಬಾಸ್ ಹಾಜಿ, ಕೆ.ಬಿ. ಖಾಸಿಂ ಹಾಜಿ, ಅಬೂಬಕರ್ ಜಾಲ್ಸೂರು, ಅಶ್ರಫ್ ಸಖಾಫಿ ಕಕ್ಕಿಂಜೆ,ಎಸ್.ಪಿ. ಬಶೀರ್ ಕುಂಬ್ರ, ಆಶಿಕುದ್ದೀನ್ ಅಖ್ತರ್, ಯೂಸುಫ್ ಸಾಜ, ಅಶ್ರಫ್ ಕರ್ನೂರು, ಅಲಿ ಸಅದಿ ಬಲ್ಕಾಡ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನಿ ಕಾಮಿಲ್ ಸ್ವಾಗತಿಸಿದರು. ಸಂಚಾಲಕ ಶಾಕಿರ್ ಹಾಜಿ ಪುತ್ತೂರು ವಂದಿಸಿದರು.





