ಮಂಜೇಶ್ವರ: ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ

ಕುಂಜತ್ತೂರು, ಜ.14: ಮಂಜೇಶ್ವರ ಗ್ರಾಪಂ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ಇತೀಚೆಗೆ ನಡೆಯಿತು. ಹೈದರ್ ಪರ್ತಿಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಫೇಮಸ್ ಕ್ಲಬ್ ಸ್ಥಾಪಕಾಧ್ಯಕ್ಷ ಮೂಸ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕ್ಲಬ್ ಅಧ್ಯಕ್ಷ ಇರ್ಷಾದ್, ಹರೀಶ್ಚಂದ್ರ ಮಂಜೇಶ್ವರ, ದಿನೇಶ್ ಶೆಣೈ, ರಹ್ಮಾನ್ ಉದ್ಯಾವರ, ಅಬ್ದುರ್ರಹ್ಮಾನ್ ಹಾಜಿ ಕೆ.ಎಂ ರಫೀಕ್ ಗುಡ್ಡಕ್ಕೇರಿ, ಶಮೀರ್ ಕುವೈಟ್, ಫೈಝಲ್, ರಫೀಕ್ ಪಿ.ಎಂ. ಮತ್ತಿತರರು ಉಪಸ್ಥಿತರಿದ್ದರು.
ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಎಕೆಎಂ ಅಶ್ರಫ್ ಪಂದ್ಯ ಉದ್ಘಾಟಿಸಿದರು. ಗೈಸ್ ಕಾಟಿಪಳ್ಳ ತಂಡ ಪ್ರಥಮ ಸ್ಥಾನದೊಂದಿಗೆ 7 ಸಾವಿರ ರೂ., ಕೊಪ್ಪಳ ಫ್ರೆಂಡ್ಸ್ ದ್ವಿತೀಯ ಸ್ಥಾನದೊಂದಿಗೆ 3 ಸಾವಿರ ರೂ.ವನ್ನು ತನ್ನದಾಗಿಸಿಕೊಂಡಿತು.
ಮಂಜೇಶ್ವರ ಗ್ರಾಪಂ ಅಧ್ಯಕ್ಷ ಅಝೀಝ್ ಹಾಜಿ, ಸದಸ್ಯ ಫೈಝಲ್ ಮಚ್ಚಂಪ್ಪಾಡಿ, ಹರೀಶ್ಚಂದ್ರ ಮಂಜೇಶ್ವರ ಬಹುಮಾನ ವಿತರಿಸಿದರು.
Next Story





