ಲೋಕಾಯುಕ್ತ ನೇಮಕ; ‘ಆರೋಪಗಳಿದ್ದರೆ ಎಸ್.ಆರ್.ನಾಯ್ಕ ಬೇಡ’: ಸಂತೋಷ್ ಹೆಗ್

ಹುಬ್ಬಳ್ಳಿ, ಜ.14: ಆರೋಪ ಗಳಿದ್ದರೆ ನ್ಯಾಯಮೂರ್ತಿ ಎಸ್.ಆರ್.ನಾಯ್ಕ ಅವರನ್ನು ಲೋಕಾಯುಕ್ತರನ್ನಾಗಿ ನೇಮಿ ಸುವುದು ಬೇಡ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆ ದೇಶದಲ್ಲೇ ಪ್ರಭಲವಾದ ಸಂಸ್ಥೆ, ಇಂತಹ ಸಂಸ್ಥೆಗೆ ದಕ್ಷ ಮತ್ತು ಪ್ರಾಮಾಣಿಕರನ್ನು ನೇಮಕ ಮಾಡಬೇಕಾಗುತ್ತದೆ. ಪ್ರಸ್ತುತ ನೇಮಿಸಲು ಉದ್ದೇಶಿಸಿರುವ ಎಸ್.ಆರ್.ನಾಯ್ಕ ಅವರ ಮೇಲೆ ಆರೋಪಗಳಿದ್ದರೆ ಅವರ ಹೆಸರನ್ನು ಶಿಫಾರಸು ಮಾಡುವುದು ಬೇಡ ಎಂದು ಹೇಳಿದ್ದಾರೆ. ಲೋಕಾಯುಕ್ತವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿರುವ ಅವರು ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ಪ್ರಬಲಗೊಳಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
Next Story





