ಎಪ್ರಿಲ್ 30ರಂದು ಅಲ್ ಜಝೀರ ಅಮೆರಿಕ ಬಂದ್
ಪ್ಯಾಸಡೇನ (ಕ್ಯಾಲಿಫೋರ್ನಿಯ), ಜ. 14: ಎಪ್ರಿಲ್ 30ರಂದು ಮುಚ್ಚುವುದಾಗಿ ಅಲ್ ಜಝೀರ ಅಮೆರಿಕ ಕೇಬಲ್ ನ್ಯೂಸ್ ನೆಟ್‌ವರ್ಕ್ ಬುಧವಾರ ತಿಳಿಸಿದೆ. ಪ್ರತಿಕೂಲ ವಾಣಿಜ್ಯ ವಾತಾವರಣ ಹಾಗೂ ರಾಜಕೀಯ ಪ್ರತಿರೋಧಗಳನ್ನು ಎದುರಿಸಲಾರದೆ ಅರಬ್ ಚಾನೆಲ್ ಈ ನಿರ್ಧಾರಕ್ಕೆ ಬಂದಿದೆ.
ತನ್ನ ಚಾನೆಲನ್ನು ಪ್ರಸಾರಿಸುವಂತೆ ಕೇಬಲ್ ಮತ್ತು ಉಪಗ್ರಹ ಕಂಪೆನಿಗಳ ಮನವೊಲಿಕೆ ಮಾಡುವಲ್ಲಿ ಹಾಗೂ ವೀಕ್ಷಿಸುವಂತೆ ವೀಕ್ಷಕರ ಮನೊವೊಲಿಸುವಲ್ಲಿ ಕತರ್‌ನ ಅಲ್ ಜಝೀರ ಕೇಬಲ್ ನೆಟ್‌ವರ್ಕ್‌ನ ಸೋದರ ಚಾನೆಲ್ ವಿಫಲವಾಗಿತ್ತು.
ಅದು ಎಪ್ರಿಲ್ 30ರಂದು ಕಚೇರಿಗೆ ಬಾಗಿಲು ಹಾಕಲಿದೆ. ಎರಡೂವರೆ ವರ್ಷಗಳ ಹಿಂದೆ ಅಂದರೆ 2013 ಅಕ್ಟೋಬರ್‌ನಲ್ಲಿ ಪ್ರಸಾರ ಆರಂಭಿಸಿತ್ತು.
ತನ್ನ ಮಾಧ್ಯಮ ಎದುರಿಸಿದ ಪ್ರತಿಕೂಲ ಆರ್ಥಿಕ ವಾತಾವರಣದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಯಿತು ಎಂದು ಅಲ್ ಜಝೀರ ಅಮೆರಿಕದ ಸಿಇಒ ಅಲ್ ಆ್ಯನ್‌ಸ್ಟೇ ಹೇಳಿದರು.
Next Story





