ನಾಳೆ ದಕ್ಷಿಣ ರಾಜ್ಯಗಳ ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಾದೇಶಿಕ ಸಭೆ
ಬೆಂಗಳೂರು, ಜ.14: ದಕ್ಷಿಣ ರಾಜ್ಯಗಳ ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಾದೇಶಿಕ ಸಭೆಯು ಜ.16 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ದಿ ಹೊಟೇಲ್ ಕ್ಯಾಪಿಟಲ್ ಸಭಾಂಗಣದಲ್ಲಿ ನಡೆಯಲಿದೆ. ಈ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಸರಕಾರದ ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ವಹಿಸಲಿದ್ದಾರೆ.
ಈ ಪ್ರಾಂತೀಯ ಸಭೆಯಲ್ಲಿ ದಕ್ಷಿಣ ವಲಯದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೇರಿ ಹಾಗೂ ಲಕ್ಷದೀಪಗಳ ರಾಜ್ಯಮಟ್ಟದ ಆಹಾರ ಮ ್ತು ಗ್ರಾಹಕ ಸಂರಕ್ಷಣೆ(ನಾಗರಿಕ ಸರಬರಾಜು) ಕಾರ್ಯದರ್ಶಿಗಳು, ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





