Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಜ್ಞಾನ ವಿಸ್ಮಯವಾಗಿಯೇ ಉಳಿದ...

ವಿಜ್ಞಾನ ವಿಸ್ಮಯವಾಗಿಯೇ ಉಳಿದ ತಿಮಿಂಗಿಲಗಳ ಪಲ್ಲಟ

ಮೃದುಲಾ ಚಾರಿಮೃದುಲಾ ಚಾರಿ14 Jan 2016 11:50 PM IST
share
ವಿಜ್ಞಾನ ವಿಸ್ಮಯವಾಗಿಯೇ ಉಳಿದ ತಿಮಿಂಗಿಲಗಳ ಪಲ್ಲಟ

ನೂರಕ್ಕೂ ಹೆಚ್ಚು ಸಣ್ಣ ಕಿವಿರುಗಳ ದೈತ್ಯ ತಿಮಿಂಗಿಲಗಳು ದಕ್ಷಿಣ ತಮಿಳುನಾಡಿನ ತೂತುಕುಡಿ ಕಡಲ ಕಿನಾರೆಯಲ್ಲಿ ಕೊಚ್ಚಿಕೊಂಡು ಬಂದು ದಡ ಸೇರಿದ ಒಂದು ದಿನದ ಬಳಿಕ ಪರಿಹಾರ ಕಾರ್ಯಾಚರಣೆ ಆರಂಭವಾಗಿದ್ದು, ಉಳಿದ ತಿಮಿಂಗಿಲಗಳನ್ನು ಸಮುದ್ರ ಸೇರಿಸುವ ಪ್ರಯತ್ನ ನಡೆಯುತ್ತಿದೆ.

ಮೊನ್ನೆ ತಡರಾತ್ರಿ ಈ ತಿಮಿಂಗಿಲಗಳನ್ನು ಮತ್ತೆ ಸಮುದ್ರಕ್ಕೆ ಸೇರಿಸುವ ಕಾರ್ಯ ಆರಂಭವಾಗಿದೆ ಎಂದು ತೂತುಕುಡಿ ಮೂಲದ ಸೌಗಂಧಿ ದೇವದಾಸನ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಜೆ.ಕೆ.ಪ್ಯಾಟರ್ಸನ್ ಎಡ್ವರ್ಡ್ ವಿವರಿಸಿದರು. ಬೆಳಗ್ಗೆ ವೇಳೆಗೆ ಬಹಳ ಸಂಖ್ಯೆಯಲ್ಲಿ ತಿಮಿಂಗಿಲಗಳು ದಡಕ್ಕೆ ಬಂದಿರುವುದು ಗಮನಕ್ಕೆ ಬಂತು. ಸ್ಥಳೀಯರ ಸಹಕಾರದೊಂದಿಗೆ ಅವುಗಳನ್ನು ರಕ್ಷಿಸುವ ಪರಿಹಾರ ಪ್ರಯತ್ನ ರಾತ್ರಿ ವೇಳೆಗೆ ಆರಂಭವಾಯಿತು ಎಂದು ಹೇಳಿದರು.
ತಿಮಿಂಗಿಲಗಳನ್ನು ಮರಳಿ ಸಮುದ್ರ ಸೇರಿಸುವ ಕಾರ್ಯಾಚರಣೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿತು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿಯಿಂದ ಹಿಡಿದು, ಅರಣ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ಸಂಶೋ ಧನಾ ಸಂಸ್ಥೆಗಳ ವರೆಗೆ ಈ ಕಾರ್ಯಾಚರಣೆಗೆ ಕೈಜೋಡಿಸಲು ಮುಂದೆ ಬಂದವು.
ಸುಮಾರು ಐದು ಕಿಲೋಮೀಟರ್ ವ್ಯಾಪ್ತಿಯ ಕಡಲ ತೀರಕ್ಕೆ ಕೊಚ್ಚಿಕೊಂಡು ಬಂದ 81 ದೈತ್ಯ ಸಸ್ತನಿಗಳ ಪೈಕಿ 45 ಈಗಾಗಲೇ ಮೃತಪಟ್ಟಿವೆ. ಪರಿಹಾರ ಕಾರ್ಯಾಚರಣೆ ಸಿಬ್ಬಂದಿ ಉಳಿದ ತಿಮಿಂಗಿಲಗಳನ್ನು ಆಳ ಸಮುದ್ರಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇವಿಷ್ಟೇ ಸಾಲದು.
‘‘ಈ ದೈತ್ಯ ತಿಮಿಂಗಿಲಗಳು ಶಬ್ದದ ಅಲೆಗಳನ್ನು ಹೊರಸೂಸುತ್ತಾ ಅದಕ್ಕೆ ತಕ್ಕಂತೆ ಚಲಿಸುತ್ತವೆ’’ ಎಂದು ತೂತುಕುಡಿ ಮೀನುಗಾರಿಕಾ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಜಿ. ಸುಕುಮಾರ್ ಅಭಿಪ್ರಾಯಪಡುತ್ತಾರೆ. ‘‘ಹೀಗೆ ಅಪಾರ ಸಂಖ್ಯೆಯಲ್ಲಿ ತಿಮಿಂಗಿಲಗಳು ದಡ ಸೇರಲು ಮುಖ್ಯ ಕಾರಣ ವೆಂದರೆ ಶಬ್ದದ ಅಲೆಗಳ ಅಸಮತೋಲನ. ಇದುವೇ ನಿಜವಾದ ಕಾರಣವಾಗಿದ್ದರೆ, ಅವುಗಳನ್ನು ಸುರಕ್ಷಿತ ನೀರಿಗೆ ಸೇರಿಸಿದರೂ ಮತ್ತೆ ದಡಕ್ಕೆ ಬರುವ ಎಲ್ಲ ಸಾಧ್ಯತೆಯೂ ಇದೆ’’ ಎಂದು ಅವರು ಸ್ಪಷ್ಟಪಡಿಸುತ್ತಾರೆ.


ಸುಕುಮಾರ್ ಮತ್ತು ಅವರ ಪರಿಹಾರ ಕಾರ್ಯಾಚರಣೆ ತಂಡದ ಸದಸ್ಯರು ಮಂಗಳವಾರ ಮಧ್ಯರಾತ್ರಿ ಸುದ್ದಿ ತಿಳಿಯುತ್ತಿದ್ದಂತೆ ಕಡಲತಡಿಗೆ ಧಾವಿಸಿದ್ದು, ಬುಧವಾರ ಸಂಜೆ 5ರವರೆಗೂ ಪರಿಹಾರ ಕಾರ್ಯಾಚರಣೆ ನಡೆಸಿ, ಅಲ್ಪವಿಶ್ರಾಂತಿಗೆ ತೆರಳಿದರು. ಡಾಲ್ಫಿನ್ ಅಥವಾ ತಿಮಿಂಗಿಲ?
ಸಣ್ಣ ಕಿವಿರುಗಳ ದೈತ್ಯ ತಿಮಿಂಗಿಲಗಳು ವಾಸ್ತವವಾಗಿ ಡಾಲ್ಫಿನ್ (ಹಂದಿಮೀನು) ಕುಟುಂಬಕ್ಕೆ ಸೇರಿದವು. ಈ ಕುರಿತ ಗೊಂದಲಗಳು ಎಲ್ಲ ವರದಿಗಳಲ್ಲಿ ಇದ್ದವು. ಡಾಲ್ಫಿನ್‌ಗಳು ಅಥವಾ ತಿಮಿಂಗಿಲಗಳು ವ್ಯಾಪಕ ಪ್ರಮಾಣದಲ್ಲಿ ಸಮುದ್ರ ದಂಡೆಗೆ ಬಂದಿವೆ ಎಂಬ ವರದಿಗಳು ಪ್ರಕಟವಾಗಿದ್ದವು.
ದೈತ್ಯ ತಿಮಿಂಗಿಲಗಳು ವಿಶ್ವದ ಹಲವೆಡೆ ಕರಾವಳಿ ತೀರದಲ್ಲಿ ದೊಡ್ಡ ಸಂಖ್ಯೆಯಲ್ಲಿ ದಡಕ್ಕೆ ಬರುವ ನಿದರ್ಶನಗಳಿವೆ. ನ್ಯೂಜಿಲೆಂಡ್‌ನಿಂದ ಸಾಮಾನ್ಯವಾಗಿ ಇಂಥ ಸಾಮೂಹಿಕವಾಗಿ ತಿಮಿಂಗಿಲಗಳು ದಡ ಸೇರುವ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತಿವೆ. ಕಳೆದ ಫೆಬ್ರವರಿಯಲ್ಲಿ 200ಕ್ಕೂ ಹೆಚ್ಚು ಇಂಥ ತಿಮಿಂಗಿಲಗಳು ದೇಶದ ದಕ್ಷಿಣ ದ್ವೀಪದಲ್ಲಿ ಕೊಚ್ಚಿಕೊಂಡು ದಡಕ್ಕೆ ಬಂದಿದ್ದವು. ಪರಿಹಾರ ಕಾರ್ಯಾಚರಣೆಯಲ್ಲಿ ಕೇವಲ 66ನ್ನು ಮಾತ್ರ ಮತ್ತೆ ಸಮುದ್ರಕ್ಕೆ ಸೇರಿಸಲು ಸಾಧ್ಯವಾಗಿತ್ತು.
ಇಂಥ ದೈತ್ಯ ತಿಮಿಂಗಿಲಗಳು ಸಾಮಾನ್ಯ ವಾಗಿ ಗುಂಪಿನಲ್ಲಿ ಚಲಿಸುತ್ತವೆ. ಈ ಗುಂಪು 60ರಿಂದ 1,000 ವರೆಗೂ ಇರಬಹುದು. ಇವುಗಳು ತೀರಾ ಸಾಮಾಜಿಕ ಗುಂಪುಗಳಾಗಿ ಸಂಘಟನೆಯಲ್ಲಿ ಕಾರ್ಯನಿರ್ವಹಿಸುವುದರಿಂದ, ಇಡೀ ಗುಂಪಿನಲ್ಲಿ ಕೆಲವು ತಿಮಿಂಗಿಲಗಳು ದಡಕ್ಕೆ ಬಂದರೆ ಗುಂಪಿನ ಇತರ ತಿಮಿಂಗಿಲಗಳು ಕೂಡಾ ಅವನ್ನು ಅನುಸರಿಸುತ್ತವೆ.
ಇಂಥ ತಿಮಿಂಗಿಲಗಳು ಹವಾಮಾನದ ಬದಲಾವಣೆಗೂ ಸೂಕ್ಷ್ಮವಾಗಿರುತ್ತವೆ. 1982-83ರಲ್ಲಿ ಕಂಡುಬಂದ ಪ್ರಬಲ ಎಲ್‌ನಿನೊ ಬಳಿಕ ಇವೆಲ್ಲವೂ ದಕ್ಷಿಣ ಕ್ಯಾಲಿಪೋರ್ನಿಯಾ ಕರಾವಳಿ ಯಿಂದ ಕಣ್ಮರೆಯಾಗಿದ್ದವು. ಕೆಲವು ಮಂದಿ ತಿಮಿಂಗಿಲಗಳ ಸಂಖ್ಯೆ ಕಡಿಮೆಯಾಗುವುದನ್ನು ಇವುಗಳ ಆಹಾರವಾದ ಸ್ಕ್ವಿಡ್ ಜಾತಿಯ ಮೀನಿನ ಸಂಖ್ಯೆ ಕಡಿಮೆಯಾಗಿರುವುದರ ಜತೆ ಸಂಪರ್ಕ ಕಲ್ಪಿಸಿದ್ದರು. ಆದರೆ ಇಂದಿಗೂ ಈ ಕಣ್ಮರೆಗೆ ಕಾರಣಗಳು ಅಸ್ಪಷ್ಟವಾಗಿಯೇ ಇವೆ.

ವಿಜ್ಞಾನದ ವಿಸ್ಮಯ
ತಿಮಿಂಗಿಲಗಳು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ದಡ ಸೇರಲು ಕಾರಣವೇನು ಎನ್ನುವುದು ಯಾರಿಗೂ ಗೊತ್ತಿಲ್ಲ. ‘‘ಇದಕ್ಕೆ ಹಲವು ಸಿದ್ಧಾಂತಗಳಿವೆ. ಆದರೆ ಖಚಿತವಾಗಿ ಯಾರಿಗೂ ತಿಳಿದಿಲ್ಲ’’ ಎಂದು ಭಾರತದ ಸಾಗರ ಸಸ್ತನಿ ಸಂರಕ್ಷಣಾ ಜಾಲದ ಸಂಚಾಲಕ ಕುಮಾರನ್ ಸದಾಶಿವಂ ಹೇಳುತ್ತಾರೆ. ದೈತ್ಯ ತಿಮಿಂಗಿಲ ಗಳು ಗುಂಪುಗಳಲ್ಲಿ ಸಂಚರಿಸುತ್ತವೆ. ಯಾವುದೋ ಕಾರಣದಿಂದ ಒಂದು ಅಥವಾ ಎರಡು ದಡದತ್ತ ಬಂದಿರುವ ಸಾಧ್ಯತೆ ಇರುತ್ತದೆ. ಇದು ರೋಗ ಅಥವಾ ಸೋಂಕಿನ ಕಾರಣದಿಂದಲೂ ಇರಬಹುದು. ಆಗ ಗುಂಪಿನಲ್ಲಿದ್ದ ಇತರ ತಿಮಿಂಗಿಲಗಳೂ ಅವನ್ನು ಅನುಸರಿಸಿರಬೇಕು.
ಈ ಕಾರಣದಿಂದ, ಪರಿಹಾರ ಕಾರ್ಯಾಚರಣೆ ಮೂಲಕ ಅವುಗಳನ್ನು ಆಳ ಸಮುದ್ರಕ್ಕೆ ಮತ್ತೆ ತಳ್ಳಿದ್ದರೂ, ಸಾಮಾನ್ಯವಾಗಿ ಮತ್ತೆ ಅವು ಹಿಂದೆ ದಡಸೇರಿದ್ದ ಜಾಗಕ್ಕೆ ಬರುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳುತ್ತಾರೆ.
ಇನ್ನೂ ನಿರೂಪಿತವಾಗದ ಇನ್ನೊಂದು ವಾದದ ಪ್ರಕಾರ, ಈ ಸಾಮೂಹಿಕ ದಡ ಸೇರುವಿಕೆಯನ್ನು ಭೌಗೋಳಿಕ ಚಟುವಟಿಕೆಗಳ ಜತೆ ಸಂಪರ್ಕಿಸಬಹುದಾಗಿದೆ.
‘‘ಇಂಡೋನೇಷ್ಯಾದಲ್ಲಿ ಅಂದು ಬೆಳಗ್ಗೆ ಕಂಪನ ಉಂಟಾಗಿತ್ತು. ಇದನ್ನು ಈ ಘಟನೆಗೆ ಸಂಪರ್ಕ ಮಾಡಬಹುದೇ ಎನ್ನುವುದು ನಮಗೆ ಗೊತ್ತಿಲ್ಲ’’ ಎಂದು ಸದಾಶಿವಂ ಹೇಳುತ್ತಾರೆ.
ತಿಮಿಂಗಿಲಗಳು ದಡ ಸೇರಿರುವುದಕ್ಕೆ ಇನ್ನೊಂದು ಕಾರಣವೂ ಇರಬಹುದು. ಅದೆಂದರೆ ಸ್ಕ್ವಿಡ್ ಋತುಮಾನ ಈಗಷ್ಟೇ ಆರಂಭವಾಗಿದೆ. ಸಮುದ್ರದಂಡೆಯಲ್ಲಿ ಇವು ಅಧಿಕ ಸಂಖ್ಯೆಯಲ್ಲಿ ರುವುದರಿಂದ ಆಹಾರದ ಆಕರ್ಷಣೆಯಿಂದ ದಡದತ್ತ ಬಂದಿರುವ ಸಾಧ್ಯತೆಯೂ ಇದೆ ಎನ್ನುವುದು ಎಡ್ವರ್ಡ್ ಅವರ ಅಭಿಮತ.
ಈ ಸಸ್ತನಿಗಳು ಸಮುದ್ರವನ್ನೇ ಅವಲಂಬಿಸಿರುವಂಥವು. ಇವು ಆಳ ಸಮುದ್ರದಲ್ಲಿ ವಾಸಿಸುತ್ತವೆ ಮತ್ತು ಗುಂಪಿನಲ್ಲಿ ಚಲಿಸುತ್ತವೆ. ಆಹಾರ ಹುಡುಕುವಾಗ ಒಂದು ದಾರಿ ತಪ್ಪಿದರೆ, ಉಳಿದವು ಹಿಂಬಾಲಿಸುತ್ತವೆ
ಭಾರತದ ಕಡಲ ಕಿನಾರೆಯಲ್ಲಿ ಈ ರೀತಿ ಭಾರೀ ಸಂಖ್ಯೆಯ ತಿಮಿಂಗಿಲಗಳು ದಡ ಸೇರಿರುವುದು ಇದು ಮೂರನೆ ಘಟನೆ.
ಮೊಟ್ಟಮೊದಲ ಬಾರಿಗೆ 1852ರಲ್ಲಿ, ಕೊಲ್ಕತ್ತಾದ ಉಪ್ಪು ಕೆರೆಯಲ್ಲಿ ಹಲವಾರು ತಿಮಿಂಗಿಲಗಳು ದಡ ಸೇರಿದ್ದವು. ಬ್ರಿಟಿಷ್ ಪ್ರಾಣಿಶಾಸ್ತ್ರಜ್ಞ ಎಡ್ವರ್ಡ್ ಬೈತ್ ಇದನ್ನು ತಪ್ಪಾಗಿ ಗುರುತಿಸಿ, ಹೊಸ ಪ್ರಭೇದ ಎಂದು ಕರೆದು ‘ಗ್ಲೋಬಿಸ್ಪಸ್ ಇಂಡಿಸಸ್’ ಎಂದು ಕರೆದರು. ನಂತರ ಭೌತಶಾಸ್ತ್ರಜ್ಞರು ಅದನ್ನು ಪರಿಶೀಲಿಸಿ, ಇವು ತಿಮಿಂಗಿಲಗಳು ಎಂದು ಸ್ಪಷ್ಟಪಡಿಸಿದರು. ಇದನ್ನು ‘ಗ್ಲೋಬಿಸೆಪಲ ಮಾಕ್ರೊರೈಂಚಸ್’ ಎಂದೂ ಕರೆಯಲಾಗುತ್ತದೆ.
ಎರಡನೆ ಇಂಥ ಸಾಮೂಹಿಕ ದಡಸೇರುವಿಕೆ ಒಂದು ಶತಮಾನದ ಬಳಿಕ ಆಗಿದೆ. ಕಾಕತಾಳೀಯ ಎಂಬಂತೆ ಈಗ ಪತ್ತೆಯಾಗಿರುವ ಸ್ಥಳದಲ್ಲೇ, ಅದೇ ಕಾಲದಲ್ಲಿ 1973ರ ಜನವರಿ 14ರಂದು ಕಾಣಿಸಿಕೊಂಡಿವೆ. ಆಗ 147 ತಿಮಿಂಗಿಲಗಳು ಕಿನಾರೆಗೆ ಬಂದಿದ್ದವು. ತೂತುಕುಡಿಯ ಮೂರು ಕಿಲೋಮಿಟರ್ ಕಿನಾರೆಯುದ್ದಕ್ಕೂ ಇವು ಕಾಣಿಸಿಕೊಂಡಿದ್ದವು. ಇವು ಬಹಳ ಕಾಲ ಬದುಕಲಿಲ್ಲ ಹಾಗೂ ಅಲ್ಲೇ ಹತ್ತಿರದಲ್ಲಿ ಹೂಳಲಾಯಿತು.
ಇದು ಸಾಮಾನ್ಯ ಪ್ರಕ್ರಿಯೆಯೂ ಅಲ್ಲ; ಅಸಾಮಾನ್ಯವೂ ಅಲ್ಲ ಎಂದು ಸುಕುಮಾರ್ ಹೇಳುತ್ತಾರೆ. ಡಾಲ್ಫಿನ್‌ಗಳು ಹಾಗೂ ತಿಮಿಂಗಿಲಗಳು ಸಮುದ್ರ ಕಿನಾರೆಗೆ ಬರುವುದನ್ನು ಸಿಟಾಸೀಯನ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಇನ್ನೊಂದು ತಂಡವೂ ಪತ್ತೆ ಹಚ್ಚಿದೆ.
(ಕೃಪೆ: ಸ್ಕ್ರಾಲ್.ಇನ್)

share
ಮೃದುಲಾ ಚಾರಿ
ಮೃದುಲಾ ಚಾರಿ
Next Story
X