ಉದ್ಯಾವರ: ಬುರ್ದಾ ಮಜ್ಲಿಸ್

ಉದ್ಯಾವರ ಮಖಾಂ ಉರೂಸ್ ಅಂಗವಾಗಿ ಬುಧವಾರ ರಾತ್ರಿ ಇಷಾಹತುಲ್ ಉಲೂಂ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಿತು. ಬಳಿಕ ಉದ್ಯಾವರ ಜಮಾಅತ್ ಮುದರ್ರಿಸ್ ಅಬ್ದುಲ್ ಖಾದರ್ ಮದನಿ ವಿಶೇಷ ಪ್ರಾರ್ಥನೆಗೆ ನೇತೃತ್ವ ನೀಡಿದರು. ಅನ್ಸಾರ್ ಅಲಿ ಹುದವಿ ಮುಖ್ಯ ಪ್ರಭಾಷಣ ನೀಡಿದರು. ಹಮೀದ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದರ್ಗಾ ಸಮಿತಿ ಅಧ್ಯಕ್ಷ ಪಳ್ಳಿಕುಂಞಿ ಹಾಜಿ, ಖತೀಬ್ ಅಬ್ದುಲ್ ಸಲಾಂ ಮದನಿ,ಅಬೂಬಕರ್ ಮಾಹಿನ್‌ಅಬ್ದುಲ್ಲ ಪೋಕರ್, ಉದ್ಯಮಿ ಅಲಿ ಹಾಜಿ, ಇಬ್ರಾಹೀಂ ಫೈಝಿ ಸಹಿತ ಹಲವರು ಉಪಸ್ಥಿತರಿದ್ದರು.
Next Story





