ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲಿರುವ ಸೇನಾ ಶ್ವಾನಗಳು
ಹೊಸದಿಲ್ಲಿ,ಜ.14: ಭೀತಿವಾದ ಮತ್ತು ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಅಸಂಖ್ಯಾತ ಯೋಧರ ಪ್ರಾಣಗಳನ್ನು ರಕ್ಷಿಸಿರುವ ಭಾರತೀಯ ಸೇನೆಯ ಶ್ವಾನಗಳು 26ವರ್ಷಗಳ ವಿರಾಮದ ಬಳಿಕ ಜ.26ರಂದು ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜಪಥದಲ್ಲಿ ಹೆಜ್ಜೆಗಳನ್ನು ಹಾಕಲಿವೆ.
ಸುಮಾರು 1,200 ಲ್ಯಾಬ್ರಡಾರ್ ಮತ್ತು ಜರ್ಮನ್ ಷೆಪರ್ಡ್ ಶ್ವಾನಗಳನ್ನು ಹೊಂದಿರುವ ಸೇನೆಯು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು 36 ಶ್ವಾನಗಳನ್ನು ಆಯ್ಕೆ ಮಾಡಿದೆ. ಈ ಶ್ವಾನಗಳೊಂದಿಗೆ ಅವುಗಳ ನಿರ್ವಾಹಕರೂ ಹೆಜ್ಜೆ ಹಾಕಲಿದ್ದಾರೆ. 1960,ಮಾ.1ರಂದು ಮೀರತ್‌ನಲ್ಲಿ ಸ್ಥಾಪನೆಗೊಂಡಿರುವ ಯುದ್ಧ ಶ್ವಾನ ತರಬೇತಿ ಕೇಂದ್ರದಲ್ಲಿ ಮೂಲ ತರಬೇತಿಗಳ ಜೊತೆಗೆ ಸ್ಫೋಟಕಗಳ ಪತ್ತೆ,ನೆಲಬಾಂಬ್ ಪತ್ತೆ, ಶತ್ರುಗಳ ಜಾಡು ಹಿಡಿಯುವಿಕೆ,ಕಾವಲು ಮತ್ತು ದಾಳಿ ನಡೆಸುವ ಬಗ್ಗೆ ಶ್ವಾನಗಳು ಮತ್ತು ಅವುಗಳ ನಿರ್ವಾಹಕರಿಗೆ ತರಬೇತಿಯನ್ನು ನೀಡಲಾಗುತ್ತದೆ.
Next Story





