ಶಬರಿಮಲೆ ಯಾತ್ರಾರ್ಥಿ ಹೃದಯಾಘಾತದಿಂದ ಮೃತ್ಯು
ಬಂಟ್ವಾಳ, ಜ.14: ಇಲ್ಲಿನ ಚೆಂಡ್ತಿಮಾರ್ ನಿವಾಸಿ, ಶಬರಿ ಮಲೆ ಯಾತ್ರಾರ್ಥಿ ಬಾಲಕನೋರ್ವ ದೈವಸನ್ನಿಧಿ ಬಳಿ ಹೃದಯಾ ಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ರಾಮ ಕುಲಾಲ್ ಅವರ ಪುತ್ರ, ಇಲ್ಲಿನ ಎಸ್.ವಿ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿ ನಿಕೇತ್ ಕುಮಾರ್ (16) ಮೃತ ಪಟ್ಟವರು.
ಹೃದಯಾಘಾತಕ್ಕೊಳಗಾದ ನಿಕೇತ್‌ರನ್ನು ತಕ್ಷಣ ಕೊಟ್ಟಾಯಂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಬಂಟ್ವಾಳ ಬಡ್ಡಕಟ್ಟೆ ಸ್ಮಶಾನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆದಿದೆ.
Next Story





